ಭಟ್ಕಳ, ಫೆಬ್ರವರಿ 7:ತಾಲೂಕಿನ ಶಿರಾಲಿ ಪಂಚಾಯತ್ ವ್ಯಾಪ್ತಿಯ ಸಾರದೊಳೆ ಎಂಬಲ್ಲಿ ರಾಮ ಮಾಸ್ತಿ ನಾಯ್ಕ ಎಂಬುವವರ ಮನೆಗೆ ಶನಿವಾರ ರಾತ್ರಿ ಅಕಸ್ಮಿಕವಾಗಿ ಬೆಂಕಿ ಹಚ್ಚಿಕೊಂಡ ಪರಿಣಾಮವಾಗಿ ಸುಮಾರು ೨ಲಕ್ಷಕ್ಕೂ ಅಧಿಕ ಮನೆಬಳಕೆಯ ಪೀಠೋಪಕರಣ, ಬಟ್ಟೆ ಬರೆ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾದ ಘಟನೆ ಜರುಗಿದ್ದು ಈ ಕುರಿತು ಯಾವುದೇ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಅಗ್ನಿಶಾಮಕ ದಳದವರು ಬಂದು ಕೂಡಲೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸಕಾಲದಲ್ಲಿ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ ಪರಿಣಾಮವಾಗಿ ಹೆಚ್ಚಿನ ಅನಾಹುತವಾಗುವುದು ತಪ್ಪಿದಂತಾಗಿದೆ.