ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ನಿತ್ಯಾನಂದ ಆಧುನಿಕ ವಾತ್ಸಾಯನ

ನಿತ್ಯಾನಂದ ಆಧುನಿಕ ವಾತ್ಸಾಯನ

Fri, 23 Apr 2010 14:29:00  Office Staff   S.O. News Service

ಬೆಂಗಳೂರು, ಏ. 23 : ಕಳಂಕಿತ ದೇವಮಾನವ ಸ್ವಾಮಿ ನಿತ್ಯಾನಂದ ಯೋಗದ ಹೆಸರಿನಲ್ಲಿ ಅನೇಕ ಮಹಿಳೆಯೊಂದಿಗೆ ಲೈಂಗಿಕತೆಯಲ್ಲಿ ತೊಡಗಿರುವುದು ಸಿಐಡಿ ಪೊಲೀಸರು ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್ ಮತ್ತು ಲ್ಯಾಪ್ ಟಾಪ್ ಗಳಿಂದ ಮೂಲಕ ಸ್ಪಷ್ಟಗೊಂಡಿದೆ. ಅಷ್ಟೇ ಅಲ್ಲ ಲರ್ನಿಂಗ್ ಫ್ರಮ್ ದಿ ಮಾಸ್ಟರ್ ಪ್ರೋಗ್ರಾಮ್ ಎಂಬ ಥೇಟ್ ವಾತ್ಸಾಯನನನ್ನು ಮೀರಿಸುವಂತ ಯೋಗವನ್ನು ನಿತ್ಯಾನಂದ ನಡೆಸುತ್ತಿದ್ದ ಜೊತೆಗೆ ಬಲವಂತವಾಗಿ ಭಕ್ತರನ್ನು ಲೈಂಗಿಕತೆಗೆ ತಳ್ಳುತ್ತಿದ್ದ ಎನ್ನುವ ಮತ್ತೊಂದು ಸ್ಪೆಷಲ್ ನ್ಯೂಸ್ ಹೊರಬಿದ್ದಿದೆ.

ಕಳೆದ ಒಂದೂವರೆ ತಿಂಗಳಿಂದ ತಮಿಳು ನಟಿ ರಂಜಿತಾಳೊಂದಿಗೆ ಬೆಡ್ ರೂಂ ಸೀನ್ ಗಳ ಮೂಲಕ ದೇಶಾದ್ಯಂತ ಕುಖ್ಯಾತಿ ಪಡೆದಿದ್ದ. ಅಂದಿನಿಂದಲೇ ನಿತ್ಯಾನಂದ ಅಂದಿನಿಂದಲೇ ಅತನ ಹತ್ತು, ಹಲವು ಲೀಲೆಗಳು ಹೊರಬರತೊಡಗಿವೆ. ನಿತ್ಯಾನಂದ ಯೋಗದ ಮೂಲಕವೇ ಪ್ರಸಿದ್ದಿಗೆ ಬಂದಿರುವ ದೇವಮಾನವ. ಈತ ಹೇಳಿಕೊಡುತ್ತಿದ್ದ ವಿಶಿಷ್ಠವಾದ ಯೋಗಗಳು ಅನೇಕ ಜನರು ಮಾರುಹೋಗಿದ್ದರು. ದೇಶ, ವಿದೇಶಿಗಳ ಪುರುಷ ಮತ್ತು ಮಹಿಳಾ ಭಕ್ತರನ್ನು ಹೊಂದಿದ್ದ ನಿತ್ಯಾನಂದ, ವಿದೇಶಗಳಲ್ಲಿಯೂ ತನ್ನ ನಿತ್ಯಾಶ್ರಮವನ್ನು ಆರಂಭಿಸಿದ್ದರು. ಇದೆಲ್ಲವೂ ಹಳೆಯ ಸುದ್ದಿ.

ಇದೀಗ ಬಹಿರಂಗೊಂಡಿರುವ ಹೊಸ ಸುದ್ದಿಯೆಂದರೆ, ಬೆಂಗಳೂರಿನ ಬಿಡದಿಯಲ್ಲಿರುವ ಧ್ಯಾನಪೀಠ ಆಶ್ರಮದಲ್ಲಿ ನಿತ್ಯಾನಂದ ಲರ್ನಿಂಗ್ ಫ್ರಮ್ ದಿ ಮಾಸ್ಟರ್ ಪ್ರೋಗ್ರಾಮ್ ಎಂಬ ವಿಶಿಷ್ಠ ಯೋಗ ತರಬೇತಿಯನ್ನು ನೀಡುತ್ತಿದ್ದರು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಇತಿಹಾಸದಲ್ಲಿ ಕಾಮದ ಮಹಾರಾಜನೆಂದು ಪ್ರಸಿದ್ಧ ಪಡೆದುಕೊಂಡಿರುವ ವಾತ್ಸಾಯನನನ್ನೂ ಮೀರಿಸುವಂತ ಯೋಗವನ್ನು ಈ ನಿತ್ಯಾನಂದ ಸ್ವಾಮಿ ಹೇಳಿಕೊಡುತ್ತಿದ್ದ ಎನ್ನುವುದು. ಈ ಯೋಗದಲ್ಲಿ ಪಾಲ್ಗೊಳ್ಳಬೇಕು ಎನ್ನುವುವರಿಗೆ ಕೆಲವು ಷರತ್ತುಗಳಿದ್ದವು. ಆ ಷರತ್ತುಗಳಿಗೆ ಭಕ್ತರು ಒಪ್ಪಿಕೊಂಡಲ್ಲಿ ಮಾತ್ರ ಯೋಗಭ್ಯಾಸಕ್ಕೆ ಅವಕಾಶ, ಇಲ್ಲದಿದ್ದರೆ ನೋ ಎಂಟ್ರಿ !

ಲರ್ನಿಂಗ್ ಫ್ರಮ್ ದಿ ಮಾಸ್ಟರ್ ಎಂಬ ಯೋಗಾಭ್ಯಾಸದಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದರು. ಈ ಯೋಗಭ್ಯಾಸಕ್ಕೆ ಕಡ್ಡಾಯವಾಗಿ ಭಾಗವಹಿಸುವ ಭಕ್ತರು ಬೆತ್ತಲಾಗಿ ಪಾಲ್ಗೊಳ್ಳಬೇಕು. ಸಂಭೋಗ ಕ್ರಿಯೆ, ಲೈಂಗಿಕತೆ ಸುಖ ಅನುಭವಿಸುವುದು ಮತ್ತು ದೈಹಿಕ ಸಮ್ಮಿಳನಗಳ ಬಗ್ಗೆ ವಿಸ್ತೃತ ವಿವರಣೆಯನ್ನು ಈ ನಿತ್ಯಾನಂದ ಹೇಳಿಕೊಡುತ್ತಿದ್ದ. ಈ ಸಂದರ್ಭದಲ್ಲಿ ಅನೇಕ ಮಹಿಳೆಯೊಂದಿಗೆ ಲೈಂಗಿಕತೆ ತೊಡಗಿರುವುದು ನಿತ್ಯಾನಂದನ ಅಶ್ರಮದಿಂದ ಸಿಐಡಿ ಪೊಲೀಸರು ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್ ಗಳ ಮೂಲಕ ಗೊತ್ತಾಗಿದೆ. ನಿತ್ಯಾನಂದ ಸ್ವಾಮಿ ನಿತ್ಯ ಅಂದ ಅನುಭವಿಸಿದ್ದುದು ಬರೀ ತಮಿಳು ನಟಿ ರಂಜಿತಾ ಜೊತೆ ಮಾತ್ರವಲ್ಲ. ಆತನ ಪ್ರೇಯಸಿಯರು ಅನೇಕ ಜನರಿದ್ದಾರೆ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಕೃಪೆ:ದಟ್ಸ್ ಕನ್ನಡ


Share: