ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ’ಶಾಲೆಯೆಡೆಗೆ ಪುರಸಭೆ’ - ಸ್ವಚ್ಛತಾ ಆಂದೋಲನದ ನೂತನ ಪ್ರಯೋಗ

ಸಕಲೇಶಪುರ: ’ಶಾಲೆಯೆಡೆಗೆ ಪುರಸಭೆ’ - ಸ್ವಚ್ಛತಾ ಆಂದೋಲನದ ನೂತನ ಪ್ರಯೋಗ

Thu, 24 Dec 2009 02:40:00  Office Staff   S.O. News Service
ಸಕಲೇಶಪುರ, ಡಿಸೆಂಬರ್ 23:ಪುರಸಭೆ ಹಮ್ಮಿಕೊಂಡಿರುವ ಸ್ವಚ್ಚಾತಾ ಆಂದೋಳನದ ಮುಂದುವರಿದ ಬಾಗವಾಗಿ ‘ಶಾಲೆಯಡೆಗೆ ಪುರಸಭೆ’ ಎಂಬ ವಿನೂತನ ಕಾರ್ಯಕ್ರಮ ಪಟ್ಟನದ ಸಂತಜೋಸಫರ ಶಾಲೆಯ ಆವರಣದಲ್ಲಿ ಬುದವಾರ ಬೆಳ್ಳಿಗ್ಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪುರಸಭಾ ಅಧ್ಯಕ್ಷ ಇಬ್ರಾಹಿಂ ಯಾದ್‌ಗಾರ್,   ಸ್ವಚ್ಚತಾ ನಗರ ಅಂಗವಾಗಿ  ಅರಿವು ಮುಡಿಸಲು ಜನಾ‌ಆಂಧೋಲನಕ್ಕೆ ಚಾಲನೆ ನೀಡಲಾಗಿದೆ ಇದರ ಅಂಗವಾಗಿ ‘ಶಾಲೆಯಡೆಗೆ ಪುರಸಭೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಮನುಷ್ಯ ವಿದ್ಯಾವಂತನಾಗುವುದರಿಂದ, ಉನ್ನತ ಹುದ್ದೆ,ಹಣ,ಹೆಸರು ಗಳಿಸುವುದರಿಂದ ಪರಿಪೂರ್ಣವಾಗುವುದಿಲ್ಲ ಪರಿಸರ ಉಳಿಸುವುದರ ಮೂಲಕ  ಮಾತ್ರ ನಾಗರಿಕನಾಗುತ್ತಾನೆ ಎಂದು ಹೇಳಿದರು.

ಜನರಲ್ಲಿ ಜಾಗೃತಿ ಮೂಡಿಸಲು ಪುರಸಭೆಯ ಆಡಳಿತ ಮತ್ತು ಸಿಬ್ಬಂಧಿವರ್ಗ ಸಕ್ರೀಯವಾಗಿ ಈ ಆಂದೋಲನದಲ್ಲಿ ಶ್ರಮೀಸುತ್ತಿದೆ. ವಿಧ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತಲಿನಲ್ಲಿನ ಪ್ಲಾಸ್ಟೀಕ್ ಸಂಗ್ರಹಿಸಿ ಪುರಸಭೆ ಯಿಂದಾ ಶಾಲೆಗೆ ನೀಡಲಾಗಿರುವ ತೋಟ್ಟಿಗಳಿಗೆ ಹಾಕು ವಂತೆ ಮವವಿಮಾಡಿದರು.

ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಮೂರು ಬಾಗವಾಗಿ ವಿಂಗಡಿಸಿ ಹಸಿದ, ಒಣಗಿದ ಹಾಗು ಅಫಾಯಕಾರಿ ಕಸವನ್ನು ವಿವಿಧ ಮೂರು ಕಸ ತೋಟ್ಟಿಯಲ್ಲಿ ಸಂಗ್ರಹಿಸಿ ನಂತರ ಪುರಸಭೆಯ ಕಸದ ವಾಹನಕ್ಕೆ ಜನರೇ ತಂದು ಹಾಕುವ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದರು. 

ಬಡಾವಣೆಯ ಎಲ್ಲಾ ಚರಂಡಿಗಳ, ಕಸದ ತೊಟ್ಟಿ ಮತ್ತು ಗಿಡಗಂಟೆಗಳನ್ನು ತೆಗೆದು ಸ್ವಚ್ಛಮಾಡಲಾಗಿದೆ ಕ್ರೀಮಿ ನಾಶಕ ಔಷದ ಸಿಂಪಡಿಸಲಾಗಿದೆ ಜೋತೆಗೆ ಬೀದಿ ವಿದ್ಯುತ್ ದೀಪ ದುರಸ್ತಿ, ಕಂದಾಯ ವಸೂಲಿ ಹಾಗು ಕುಡಿಯುವ ನೀರಿನ ಕರವಸೂಲಿ ಸಹ ಈ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಮಾದರಿ ಪುರಸಭೆ ಮಾಡುವುದೆ ನಮ್ಮ ಉದ್ದೇಶ ಎಂದರು. 

ಈ ಸಂದರ್ಭದಲ್ಲಿ   ಶಾಲೆಯ ಮುಖ್ಯ‌ಉಪಾದ್ಯಯರಾದ ಸಿ.ಚೇತನ,ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ್. ಉಪಾಧ್ಯಕ್ಷ ಕಾಡಪ್ಪ. ಸದಸ್ಯರಾದ ಆಕ್ರಂಪಾಷ, ಪ್ರದೀಪ, ಉಮೇಶ್, ಕುಸುಮ,ಶಿವು, ಸಂತೋಶ್, ಕಿರಿಯ ಆರೋಗ್ಯನಿರಿಕ್ಷೀಕ ಮಂಜುನಾಥ್. ಪೌರಕಾರ್ಮಿಕರು ಇದ್ದರು. 


Share: