ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ ಡಿ ವೈ.ಎಸ್.ಪಿ ಯಿಂದ ಮಾನವ ಹಕ್ಕು ಉಲ್ಲಂಘನೆ. ಆಯೋಗಕ್ಕೆ ದೂರು

ಭಟ್ಕಳ ಡಿ ವೈ.ಎಸ್.ಪಿ ಯಿಂದ ಮಾನವ ಹಕ್ಕು ಉಲ್ಲಂಘನೆ. ಆಯೋಗಕ್ಕೆ ದೂರು

Thu, 28 Jan 2010 16:32:00  Office Staff   S.O. News Service
ಭಟ್ಕಳ, ಜನವರಿ ೨೮: ಇಲ್ಲಿನ ಡಿವೈ‌ಎಸ್ಪಿ. ಡಾ. ಸಿ.ಬಿ.ವೇದಮೂರ್ತಿಯವರು ಪೋಲಿಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಲು ಹೋದ ತನ್ನ ಮೇಲೆ ವಿನಾಕಾರಣ ನನ್ನ ಮೇಲೆ ರೇಗಾಡಿದ್ದು ಜನಪ್ರತಿನಿಧಿಯಾದ ತನ್ನೊಂದಿಗೆ ಅವರು ಅನುಚಿತವಾಗಿ ವರ್ತನೆ ಮಾಡಿದ್ದಾರೆಂದು ಆರೋಪಿಸಿ ಭಟ್ಕಳ ಪುರಸಭೆ ಸದಸ್ಯರಾದ ಸನಾವುಲ್ಲಾ ಗವಾಯಿ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಸ್. ಆರ್.ನಾಯಕ ರಲ್ಲಿ ದೂರನ್ನು ನೀಡಿದ್ದಾರೆ. 
 
 
ಇಂದು ನಗರಕ್ಕೆ ಭೇಟಿನೀಡಿದ ಆಯೋಗದ ಅಧ್ಯಕ್ಷರಿಗೆ ನೀಡಿದ ದೂರಿನಲ್ಲಿ ತಿಳಿಸಿದಂತೆ ಜ.೨೭ರಂದು ತನ್ನ ಸಂಬಂಧಿಕರಾದ ಮುಝಮ್ಮಿಲ್ ಆಹ್ಮದ್ ಗೌಸ್ ಎಂಬುವವರಿಗೆ ೧೨ಜನರ ಗುಂಪೊಂದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ನೀಡಲು ಹೋದ ತನಗೆ ಡಿ.ವೈ‌ಎಸ್ಪಿ ವೇದಮೂರ್ತಿ ಯವರು ತನ್ನ ಅಧಿಕಾರ ದರ್ಪದಿಂದ ನನ್ನ ಮೇಲೆ ಜೋರಾಗಿ ರೇಗಾಡುತ್ತ ನೀನು ಇಲ್ಲಿಗೇಕೆ ಬಂದಿರುವಿ? ಎಂದು ಕೂಗುತ್ತ ಜನಪ್ರತಿನಿಧಿಯಾದ ತನ್ನ ಮೇಲೆ ಇತರ ಪೋಲಿಸ್ ಸಿಬಂಧಿಗಳ ಮುಂದೆಯೆ ನನ್ನೊಂದಿಗೆ ಏಕವಚನದಲ್ಲಿ ಮಾತನಾಡುತ್ತ ನಿನ್ನ ಮೇಲೆಯೆ ಕೇಸನ್ನು ಹಾಕಿ ಲಾಕಪ್ಪಿನಲ್ಲಿ ಹಾಕುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದು ಅಲ್ಲದೆ ಕೂಡಲೆ ಇಲ್ಲಿಂದ ಜಾಗ ಖಾಲಿ ಮಾಡು ಎಂದು ಕೂಗಿಕೊಂಡು  ಪೋಲಿಸ್ ಸಿಬಂಧಿಯನ್ನ ಕರೆದು ನನ್ನನ್ನು ಹೊರದಬ್ಬುವಂತೆ ಆದೇಶವನ್ನು ನೀಡುತ್ತಾರೆ ಇವರ ಅನುಚಿತ ವರ್ತನೆಯಿಂದಾಗಿ ನನಗೆ ಮಾನಸಿಕ ಹಿಂಸೆಯಾಗಿದ್ದು ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ಅಧಿಕಾರಿಯ ಮೇಲೆ ವಿಚಾರಣೆಯನ್ನು ಮಾಡಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಅವರು ಮಾನವ ಹಕ್ಕು  ಆಯೋಗಕ್ಕೆ   ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 
 
ಪುರಸಭೆ ಸದಸ್ಯನಾಗಿದ್ದು ಜನಪ್ರತಿನಿಧಿಯಾದ ತನ್ನ ಮೇಲೆಯೇ ಪೋಲಿಸರು ಈ ರೀತಿಯಾಗಿ ದೌರ್ಜನ್ಯವನ್ನು ಎಸಗುತ್ತಾರೆಂದಾದರೆ ಇನ್ನೂ ಸಾಮಾನ್ಯರ ಪಾಡೇನು? ಇಂತಹ ಪೋಲಿಸ್ ಅಧಿಕಾರಿಗಳಿಂದ ಸಾರ್ವಜನಿಕರಿಗೆ ನ್ಯಾಯವಾದರೂ ಹೇಗೆ ದೋರೆತೀತು ಎಂದು ಅವರು ಮಾನವ ಹಕ್ಕು ಅಯೋಗವನ್ನು ಪ್ರಶ್ನಿಸಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಕಳಕಳಿಯನ್ನು ಹೊಂದಿರದ ಡಿ.ವೈ‌ಎಸ್.ಪಿ. ವೇದಮೂರ್ತಿಯವರ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಕುರಿತು ಪ್ರಕರಣವನ್ನು ದಾಖಲಿಸಿಕೊಂಡು ತನಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ಅವರು ಮನವಿಯನ್ನು ಮಾಡಿಕೊಂಡಿದ್ದಾರೆ.


Share: