ಭಟ್ಕಳ, ಮಾರ್ಚ್ 3: ಕರ್ನಾಟಕ ವಿ.ವಿ. ಧಾರವಾಡ 3ನೆ ವಲಯ ದ ಕ್ರಿಕೆಟ್ ಪಂದ್ಯಾವಳಿಯು ಇಲ್ಲಿನ ಅಂಜುಮನ್ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತಿಚೆಗೆ ಜರುಗಿತು. ಪಂದ್ಯಾವಳಿಯಲ್ಲಿ ಉದ್ಘಾಟಕರಾಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಐ.ಆರ್, ಖಾನ್ ಬ್ಯಾಂಟಿಂಗ್ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಅವರು ಅಂಜುಮನ್ ಸಂಸ್ಥೆಯು ಇಷ್ಟು ಬೃಹದಾಕಾರವಾಗಿ ಬೆಳೆಯಲು ಶ್ರಮಿಸಿದ ಅಂಜುಮನ್ ಆಡಳಿತ ಮಂಡಳಿಯನ್ನು ಪ್ರಶಂಸಿಸಿದರು. ಅಂಜುಮನ್ ಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದಾರೆ ಎಂದ ಅವರು ಅಂಜುಮನ್ ಸಂಸ್ಥೆಯು ಈ ಭಾಗದಲ್ಲಿ ಶಿಕ್ಷಣ ಕ್ಚೇತ್ರದಲ್ಲಿ ತಮ್ಮದೆ ಆದ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ ಎಂದರು.
ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಡಿ.ಎಚ್.ಶಬ್ಬರ್ ವಹಿಸಿದ್ದರು. ಅಂಜುಮನ್ ಕಾಲೇಜಿನ ಪ್ರಾಚಾರ್ಯ ಡಾ. ಸೈಯದ್ಯ ಝಮಿರುಲ್ಲಾ ಷರೀಫ್ ಪ್ರಸ್ತಾವಿಕವಾಗಿ ಮಾತನಾಡಿದರು. ಫ್ರೋ.ಎಸ್.ಎಮ್.ಪಠಾಣ್ ಅತಿಥಿಗಳನ್ನು ಪರಿಚಯಿಸಿದರು. ಫ್ರೋ.ಎಮ್.ಕೆ.ಶೇಖ್ ಕಾರ್ಯಕ್ರಮವನ್ನು ನಿರೂಪಿಸಿದರು. ಫ್ರೋ.ಅಬ್ದುಲ್ ಕಾದಿರ್ ವಂದಿಸಿದರು. ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಮೊಹಸಿನ್ ಖರೂರಿ, ಮೌಲಾನ ಎಸ್.ಎಮ್ ಸೈಯ್ಯದ್ ಜಾಫರ್ ಮುಂತಾದವರು ಉಪಸ್ಥಿತರಿದ್ದರು.