ಸಕಲೇಶಪುರ, ಡಿಸೆಂಬರ್ 15:ಲಯನ್ಸ್ ಸಂಸ್ಥೆಯಿಂದ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗೆ 25ಲಕ್ಷ ರೂ. ದೇಣಿಗೆಯನ್ನು ನೀಡಲಾಗಿದ್ದು, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಕ್ಕೆ 2 ಲಕ್ಷ ರೂ. ಸಹಾಯ ಧನ ನೀಡಲಾಗಿದೆ ಎಂದು ಲಯನ್ಸ್ ರಾಜ್ಯಪಾಲ ಅಲ್ವಿನ್ ಪ್ಯಾಟ್ರಿಕ್ ಪತ್ರಾವೊ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತವನಾಡಿದ ಅವರು ಮಂಗಳೂರು ಸಮಿಪ ಕನ್ನಂಗೊಳಿಯಲ್ಲಿ ೭೫ ಲಕ್ಷ ರೂ. ಯೋಜನೆಯಲ್ಲಿ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆ ಪ್ರಾರಂಭಿಸಲಾಗುತ್ತದೆ. ಈ ಕಟ್ಟಡದ ಕಾಮಗಾರಿಗೆ ೨೫ ಲಕ್ಷ ರೂ. ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಕ್ಕೆ 2 ಲಕ್ಷ ರೂ. ಸಹಾಯ ಧನ ನೀಡಲಾಗಿದೆ, ಇನ್ನೂ 2 ಲಕ್ಷರೂ. ಸಂಗ್ರಹಿಸಲಾಗಿದ್ದು ಈ ಹಣದಿಂದ ಮನೆ ಕಟ್ಟಿಸಿ ಕೊಡಬೇಕೆ ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕೆ ಎಂದು ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು. ಲಯನ್ಸ್ ಸಂಸ್ಥೆ ಅಂತ ರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು ಜಗತ್ತಿನ 847 ದೇಶಗಳ ಅತಿ ಹೆಚ್ಚು ಸದಸ್ಯತ್ವದ 39 ನೇ ಕ್ರಮಾಂಕದಲ್ಲಿದೆ ಹತ್ತನೇ ಸ್ಥಾನಕ್ಕೇರಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಸುದ್ದಿ ಗೊಷ್ಠಿಯಲ್ಲಿ ಲಯನ್ಸ್ ಸಂಸ್ಥೆಯ ಪ್ರಾಂತೀಯ ಅದ್ಯಕ್ಷ ನಾಗರಾಜ್, ವಲಯ ಅದ್ಯಕ್ಷ ವಿ ಪ್ರಭಾಕರ್, ಅದ್ಯಕ್ಷ ಟಿ.ಡಿ ಗಣೇಶ್ ಬಾಬು, ಉಪಾದ್ಯಕ್ಷ ಸಿ.ಪಿ. ಪ್ರಸನ್ನ ಕುಮಾರ್, ಕಾರ್ಯದರ್ಶಿ ದಿನೇಶ್ ಕುಮಾರ್, ಅಮರ್‌ನಾಥ್ ಶೆಟ್ಟಿ, ದಯಾನಂದ್ ಶೆಟ್ಟಿ, ತಿಮ್ಮಪ್ಪ ರೈ, ಡಾ|| ಸೀತಾರಾಮ್ ಶೆಟ್ಟಿ,