ಭಟ್ಕಳ, ಡಿಸೆಂಬರ್ 20:ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ವತಿಯಿಂದ ಗುತ್ತಿಗೆದಾರರು ಹಾಗೂ ಇಂಜಿನೀಯರುಗಳಿಗೆ ಕಾಂಕ್ರೀಟ್ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ಇಲ್ಲಿಯ ರಬಿತಾ ಹಾಲಿನಲ್ಲಿ ಶುಕ್ರವಾರ ಸಂಜೆ ನಡೆಯಿತು.
ಕಚ್ಛಾ ಸಾಮಗ್ರಿಗಳ ಮಿಶ್ರಣ, ಕಾಂಕ್ರೀಟ್ ತಯಾರಿಕೆ ಹಾಗೂ ಬಳಕೆ, ಕಾಮಗಾರಿ ನಡೆಸುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ದೇಶದ ಹಾಗೂ ಹೊರ ದೇಶಗಳ ತಂತ್ರಜ್ಞಾನಗಳನ್ನು ತುಲನೆ ಮಾಡಿ ತಾಂತ್ರಿಕ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಲು ಸಲಹೆ ನೀಡಲಾಯಿತು. ಕಂಪನಿಯ ಪರವಾಗಿ ಪುನ್ನಿ ಶೆಟ್ಟಿ ಹಾಗೂ ಅಮಿತ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಐವತ್ತಕ್ಕೂ ಹೆಚ್ಚು ಗುತ್ತಿಗೆದಾರರರು ಹಾಗೂ ಇಂಜಿನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.