ಭಟ್ಕಳ, ಜನವರಿ 26: ಒಂದೇ ವಾರದಲ್ಲಿ ಭಟ್ಕಳ ತಾಲೂಕಿನಲ್ಲಿ ಎರಡು ಚರ್ಚುಗಳ ಮೇಲೆ ದಾಳಿ ನಡೆದಿದ್ದು ಈ ಹಿನ್ನಲೆಯಲ್ಲಿ ಇಂದು ಭಟ್ಕಳ ಸಹಾಯಕ ಕಮಿಷನರ್ ತ್ರೀಲೋಕಚಂದ್ರ ರ ಅಧ್ಯಕ್ಷತೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಾಂತಿ ಸಭೆ ಜರುಗಿದ್ದು ಇದರಲ್ಲಿ ತಾಲೂಕಿನ ಕ್ರೈಸ್ತ,ಹಿಂದು ಹಾಗೂ ಮುಸ್ಲಿಮ್ ಬಾಂಧವರು ಸೇರಿದ್ದರು.
ಈ ಸಂದರ್ಭದಲ್ಲಿ ಶಾಂತಿ ಸಭೇಯನ್ನುದ್ದೇಶಿಸಿ ಮಾತನಾಡಿದ ಭಟ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಡಿ.ನಾಯ್ಕ ಸಮಾಜದಲ್ಲಿ ಶಾಂತಿ ಸೌಹಾರ್ಧತೆಯನ್ನು ಕೆಡಿಸುತ್ತಿರುವ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಗಡಿಪಾರು ಮಾಡುವಂತೆ ಸಹಾಯಕ ಕಮಿಷನರ್‌ನ್ನು ಆಗ್ರಹಿಸಿದರು. ರಾಜ್ಯದ ಗೃಹಸಚಿವರು ಇತ್ತಿಗೆ ಪತ್ರಿಕೆಗಳಲ್ಲಿ ನೀಡಿದ ಹೇಳಿಕೆಯು ಬೇಜವಾಬ್ದಾರಿತನದಿಂದ ಕೂಡಿದ್ದು ರಾಜ್ಯದ ಉನ್ನತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಯನ್ನು ನೀಡಿದ್ದು ಹಾಸ್ಯಸ್ಪದವಾಗಿದೆ ಎಂದ ಅವರು ಕ್ರೈಸ್ತರ ಶಿಲುಭೆಯಲ್ಲಿ ವಜ್ರ ವೈಡೋರ್‍ಯಗಳೇನಾದರೂ ಇಡುತ್ತಾರೆಯೆ ಎಂದು ಶಾಂತಿ ಸಭೆಯಲ್ಲಿ ಹಾಜರಿದ್ದ ಫಾದರ್ ರನ್ನು ಕೇಳಿದರು. ಏಕೆಂದರೆ ರಾಜ್ಯದ ಸಚಿವರು ಶಿಲುಭೆಯನ್ನು ಒಡೆದಿದ್ದು ಯಾವುದೋ ದರೋಡೆಕೋರರ ಕೃತ್ಯ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ ಅವರು ಸಚಿವರು ಯಾವ ಉದ್ದೇಶದಿಂದ ಈ ಮಾತನ್ನು ಹೇಳಿದ್ದಾರೋ ತಮಗೆ ತಿಳಿಯದು ಎಂದರು. ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತ ದುಷ್ಕೃತ್ಯವನ್ನು ಎಸಗಿರುವ ವ್ಯಕ್ತಿಗಳ ಮೇಲೆ ಉಗ್ರಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ ಶಾಸಕರು ಈ ಕುರಿತು ಜಿಲ್ಲಾ ಪೋಲಿಸ್ ವರಿಷ್ಠ ಮತ್ತು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಒಟ್ಟಿನಲ್ಲಿ ಅವರನ್ನು ಗಡಿಪಾರು ಮಾಡಿ ಭಟ್ಕಳವನ್ನು ಶಾಂತಿಯಿಂದಿರುವಂತೆ ನೋಡಿಕೊಳ್ಳಬೇಕೆಂದು ತಾನು ಕ್ರೈಸ್ತ ಸಮುದಾಯದ ಪರವಾಗಿ ಮನವಿಯನ್ನು ಮಾಡುಕೊಳ್ಳುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು.
ಪೋಲಿಸರ ಕಾರ್ಯ ತೃಪ್ತಿದಾಯಕವಲ್ಲ: ಚರ್ಚುಗಳ ಮೇಲೆ ದಾಳಿಯನ್ನು ಮಾಡುವುದಾಗಿ ಬಹಿರಂಗ ಹೇಳಿಕೆಯನ್ನು ನೀಡಿದ ಎರಡು ದಿನದಲ್ಲಿ ಎರಡು ಕಡೆ ಚರ್ಚುಗಳ ಮೇಲೆ ದಾಳಿ ನಡೆದಿರುವುದು ಪೋಲಿಸ್ ವೈಫಲ್ಯವನ್ನು ಎತ್ತಿತೋರಿಸುತ್ತದೆ ಎಂದ ಶಾಸಕರು ಒಂದು ಕಡೆ ನಡೆದ ಘಟನೆಯನ್ನು ಗಮನದಲ್ಲಿರಿಸಿಕೊಂಡು ಪೋಲಿಸರು ಎಚ್ಚೆತ್ತುಕೊಳ್ಳಬೇಕಾಗಿತ್ತು ಆದರೆ ಅವರು ಅದನ್ನು ಮಾಡಲಿಲ್ಲ ಯಾರೋ ಹೋಮ್ ಗಾರ್ಡಗಳನ್ನು ನಿಯೋಜಿಸಿದ್ದು ಇದು ಸರಿಯಾದ ಕ್ರಮವಲ್ಲ ಜವಾಬ್ದಾರಿಯುತ ಪೊಲೀಸ್ ಸಿಬ್ಬಂದಿಗಳನ್ನು ಚರ್ಚುಗಳ ರಕ್ಷಣೆಗೆ ನಿಯೋಜಿಸಿ ಯಾರದ್ದೋ ಮುಲಾಜಿಗೆ ಒಳಗಾಗದೆ ಅರೋಪಿಗಳಿಗೆ ತಕ್ಕ ಶಾಸ್ತಿಯನ್ನು ನೀಡಿ ಎಂದು ಅವರು ಪೊಲಿಸ್ ಅಧಿಕಾರಿಗಳಿಗೆ ಸೂಚಿಸಿದರು. ಭಟ್ಕಳದಲ್ಲೀಗ ರೌಡಿಸಂ ಬೆಳೆಯುತ್ತಿದ್ದೆ ಶ್ರೀರಾಮಸೇನೆ ಎಂದು ಹೇಳಿಕೊಂಡು ತಿರುಗುತ್ತಿರುವ ಇವರು ವಾತ್ಸವದಲ್ಲಿ ರೌಡಿಜಾತಿಗೆ ಸೇರಿದವರು ಎಂದು ಲೆವಡಿಮಾಡಿದರು.
ಹಿಂದು ಮುಖಂಡ ಸೇವವಾಹಿನಿಯ ಅಧ್ಯಕ್ಷ ಸುರೇಂದ್ರ ಶಾನುಭಾಗ ಮಾತನಾಡಿ ಇಲ್ಲಿನ ಕ್ರೈಸ್ತ ಸಮುದಾಯದವರ ಆರಾಧನಾಲಯಗಳ ಮೇಲೆ ದಾಳಿ ನಡೆದಿದ್ದು ಇದು ನಮ್ಮ ಗೌರಕ್ಕೆ ಭಂಗ ತರುವಂತಹದ್ದು ನಾವು ಎಲ್ಲಾ ಧರ್ಮಗಳನ್ನು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಕೊಳ್ಳಬೇಕೆಂದು ಅವರು ಕರೆನೀಡಿದರು. ಚೌಥನಿ ಗ್ರಾಮದ ಹಿಂದು ಮುಖಂಡ ಮಾಸ್ತಯ್ಯ ನಾಯ್ಕ ಮಾತನಾಡಿ ತಮ್ಮ ಮನೆಯ ಪಕ್ಕದ ಹುಡುಗ ಶಂಕರ್ ನಾಯ್ಕ ಇಂತಹ ದುಷ್ಟನಾಗಿದ್ದಾನೆ ತಾನು ಭಾವಿಸಿರಲಿಲ್ಲ. ಇದು ಘೋರ ಅಪರಾಧವಾಗಿದ್ದು ಇದಕ್ಕಾಗಿ ತಾನು ಕ್ರೈಸ್ತ ಸಮುದಾಯದ ಕ್ಷಮೆಯನ್ನು ಯಾಚಿಸುವುದಾಗಿ ತಿಳಿಸಿದರು. ಶಂಕರ್ ನಾಯ್ಕನ ಮಾತಿಗೆ ಮರುಳಾಗಿ ಕೆಲವು ಅಮಾಯಕ ಹುಡುಗರು ಅವರ ಹೇಳಿಕೆಗೆ ಸಹಿಯನ್ನು ಹಾಕಿದ್ದು ಅಂತಹವರ ಬಗ್ಗೆ ಪರಿಶೀಲನೆಯನ್ನು ಮಾಡಬೇಕೆಂದು ಅಧಿಕಾರಿಗಳಲ್ಲಿ ವಿನಂತಿಸಿಕೊಂಡರು
ಈ ಶಾಂತಿ ಸಭೆಯಲ್ಲಿ ಫಾದರ್ ಅಲ್ಫೋನ್ಸೋ, ನ್ಯಾಯವಾದಿ ವಿಕ್ಟರ್ ಗೋಮ್ಸ್, ಮತ್ತಿತರರು ಭಾಗವಹಸಿದ್ದರು.
ಸಿ.ಪಿ.ಐ.ಗುರುಮತ್ತೂರು ಸ್ವಾಗತಿಸಿದರು. ಡಿ.ವೈ.ಎಸ್.ಪಿ. ಡಾ.ಸಿ.ಬಿ. ವೇದಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದು. ಗ್ರಾಮೀಣ ಠಾಣೆಯ ಪಿ.ಎಸ್‌ಐ ತಿಮ್ಮಪ್ಪ ನಾಯ್ಕ ವಂದಿಸಿದರು.