ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹೊಸದಿಲ್ಲಿ: ಉಡುಗೊರೆಯಾಗಿ ನೀಡಬಹುದಾದ ಸಾ ಗಿಫ್ಟ್ ಕಾರ್ಡ್ ಬಿಡುಗಡೆ

ಹೊಸದಿಲ್ಲಿ: ಉಡುಗೊರೆಯಾಗಿ ನೀಡಬಹುದಾದ ಸಾ ಗಿಫ್ಟ್ ಕಾರ್ಡ್ ಬಿಡುಗಡೆ

Fri, 16 Oct 2009 07:02:00  Office Staff   S.O. News Service
ಹೊಸದಿಲ್ಲಿ, ಅ.15: ಕಾರ್ಪೊರೇಷನ್ ಬ್ಯಾಂಕಿನ ‘ಕಾರ್ಪ್ ಬ್ಯಾಂಕ್ ಸಾ ಗಿಫ್ಟ್ ಕಾರ್ಡ್’ ಯೋಜನೆಯನ್ನು ಕೇಂದ್ರ ವಿತ್ತ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಜಿ.ಸಿ.ಚತುರ್ವೇದಿ ಮಂಗಳವಾರ ಉದ್ಘಾಟಿಸಿದರು. 

ರಿಜರ್ವ್ ಬ್ಯಾಂಕಿನ ಮಾರ್ಗದರ್ಶನದಂತೆ ಕಾರ್ಪ್ ಬ್ಯಾಂಕ್ ಈ ಯೋಜನೆ ಯನ್ನು ‘ಸಾ’ದ ಸಹಯೋಗದಲ್ಲಿ ಸಿದ್ಧಪಡಿಸಿದೆ. ಉಡುಗೊರೆಯ ರೂಪದಲ್ಲಿ ನೀಡಬಹುದಾದ ಈ ಕಾರ್ಡ್ ಪ್ರಿಪೇಯ್ಡ ಪಾಸ್ಟಿಕ್ ಕಾರ್ಡ್ ಆಗಿರುತ್ತದೆ. 

ಕನಿಷ್ಠ ಒಂದು ಸಾವಿರ ರೂ. ಬಳಿಕ ೫೦೦ರೂ. ಗಣಕದಲ್ಲಿ ಗರಿಷ್ಠ ಐದು ಸಾವಿರ ರೂ.ಗಳಲ್ಲಿ ಲಭ್ಯವಿದೆ. ದೇಶದಲ್ಲಿ ಸಾ ಸಂಪರ್ಕಿತ ಎಲ್ಲ ವ್ಯವಹಾರ ಸಂಸ್ಥೆಗಳಲ್ಲಿ ಸ್ವೀಕೃತವಾಗುವ ಈ ಕಾರ್ಡ್ ಗಿಫ್ಟ್ ವೋಚರ್‌ಗಳಿಗೆ ಪರ್ಯಾಯವಾಗಿದೆ.  ಕಾರ್ಪ್ ಬ್ಯಾಂಕಿನ  ಎಲ್ಲ ಶಾಖೆಗಳಲ್ಲಿ ಈ ಕಾರ್ಡ್ ಲಭ್ಯವಿದೆ. ಹಬ್ಬ ಹಾಗೂ ಶುಭ ಸಮಾರಂಭಗಳಲ್ಲಿ ಉಡುಗೊರೆ ಕೊಡಲು ಈ ಕಾರ್ಡ್‌ಗಳನ್ನು ಬಳಸಬಹುದು. 

ಈಗಾಗಲೇ ಕ್ರೆಡಿಟ್, ಡೆಬಿಟ್, ಟ್ರಾವೆಲ್ ಆಂಡ್ ಕ್ಯಾಂಪಸ್ ಕಾರ್ಡ್‌ಗಳನ್ನು ಅನುಷ್ಠಾನಿಸಿರುವ ಕಾರ್ಪ್ ಬ್ಯಾಂಕ್‌ನ ಇನ್ನೊಂದು ಮಹತ್ತರ ಯೋಜನೆ ಇದಾಗಿರುತ್ತದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 

ಕಾರ್ಪ್ ಬ್ಯಾಂಕಿನ ಅಧ್ಯಕ್ಷ ಜೆ.ಎಂ.ಗರ್ಗ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಡ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಆಶಿತ್ ಪಾಲ್, ಸಾದ ಏಶ್ಯಾದ ಸಿ.ಎಂ. ಉತ್ತಮ್ ನಾಯಕ್, ಕಾರ್ಪ್ ಬ್ಯಾಂಕಿನ ಮಹಾ ಪ್ರಬಂಧಕರಾದ ಎ.ಮೋಹನ್ ರಾವ್, ಬಿ.ಆರ್.ಭಟ್, ಎಚ್.ಎಸ್.ಸಾನಿ ಉಪಸ್ಥಿತರಿದ್ದರು.

Share: