ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ರಾಷ್ಟ್ರದ ಐಕ್ಯತೆಗಾಗಿ ಒಟ್ಟಾಗಲು ಸಹಾಯಕ ಕಮಿಷನರ್ ಕರೆ

ಭಟ್ಕಳ:ರಾಷ್ಟ್ರದ ಐಕ್ಯತೆಗಾಗಿ ಒಟ್ಟಾಗಲು ಸಹಾಯಕ ಕಮಿಷನರ್ ಕರೆ

Tue, 26 Jan 2010 16:56:00  Office Staff   S.O. News Service
ಭಟ್ಕಳ, ಜನವರಿ 26:  ದೇಶದಲ್ಲಿ ವಿಛಿದ್ರಕಾರಿ ಶಕ್ತಿಗಳ ಬೆಳವಣಿಗೆಯಾಗುತ್ತಿದ್ದು ಅದನ್ನು ಮೆಟ್ಟಿ ನಿಲ್ಲಲು ಇಲ್ಲಿನ ಹಿಂದು ಮುಸ್ಲಿಮ್, ಕ್ರೈಸ್ತರು ಒಟ್ಟಾಗಿ ಕಾರ್ಯಪ್ರವತ್ತರಾಗಬೇಕು ಎಂದು ಭಟ್ಕಳ ಸಹಾಯಕ ಕಮಿಷನರ್ ತ್ರೀಲೋಕಚಂದ್ರ ನಗರದ ಜನತೆಗೆ ಕರೆ ನೀಡಿದರು.
26-bkl-03.jpg
ಅವರು ಇಂದು ಬೆಳಗ್ಗೆ ೯ಗಂಟೆಗೆ ಇಲ್ಲನ ಪೊಲೀಸ್ ಪರೆಡ್ ಮೈದಾನದಲ್ಲಿ ಜರುಗಿದ  61ನೆ ಗಣರಾಜ್ಯೋತ್ಸವದ ದ್ವಜಾರೋಹಣ  ಮಾಡಿ ಗಣರಾಜ್ಯೋತ್ಸವದ  ಸಂದೇಶದವನ್ನು ನೀಡುತ್ತಿದ್ದರು ನಮ್ಮಲ್ಲಿನ ಪ್ರತಿಯೊಬ್ಬರು ದೇಶಪ್ರೇಮವನ್ನು ಬೆಳಿಸಿಕೊಳ್ಳಬೇಕಿದೆ ಎಂದು ಅವರು ಕರೆ ನೀಡಿದರು. ಅಧ್ಯಕ್ಸತೆಯನ್ನು ವಹಿಸಿ ಮಾತನಾಡಿದ ಶಾಸಕ ಜೆ.ಡಿ.ನಾಯ್ಕ ಈ ದೇಶದ ಉನ್ನತಿ ಮತ್ತು ಪ್ರಗತಿಗಾಗಿ ಎಲ್ಲಾ ಹಿಂದು ಮುಸ್ಲಿಮ್ ಮತ್ತು ಕ್ರೈಸ್ತ ಬಾಂಧವರು ಅವಿರತ ಪ್ರಯತ್ನವನ್ನು ಮಾಡಿದ್ದಾರೆ ಎಂದ ಅವರು ಈ ದೇಶವನ್ನು ವಿಛಿದ್ರಕಾರಿ ಶಕ್ತಿಗಳ ಕೈಗೆ ಹೋಗಲು ಯಾರು ಅವಕಾಶವನ್ನು ಮಾಡಿಕೊಡಬೇಡಿ. ಕೆಲವು ದಿನಗಳಿಂದ ಭಟ್ಕಳದಲ್ಲಿ ಪರಿಸ್ಥಿತಿಯು ಸರಿಯಾಗಿಲ್ಲ. ಇಲ್ಲಿ ಎರಡು ಚರ್ಚುಗಳ ಮೇಲೆ ದಾಳಿಯನ್ನು ಮಾಡಲಾಗಿದೆ ಮತ್ತು ಇದನ್ನು ಮಾಡಿದವರು ತಾವೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣೆಗೆಯಲ್ಲ ಎಂದ ಅವರು ಭಟ್ಕಳವನ್ನು ಇಂತಹ ದುಷ್ಟರಿಂದ ಕಾಪಾಡುವುದು ನನ್ನ ಜವಾಬ್ದಾರಿ ಆದ್ದರಿಂದ ನಾನು ಸ್ವಾರ್ಥ ರಾಜಕಾರಣಕ್ಕಾಗಿ ಭಟ್ಕಳವನ್ನು ಬಲಿ ನೀಡುವುದಿಲ್ಲ ಎಂದರು. 
26-bkl-01.jpg
26-bkl-04.jpg
26-bkl-05.jpg 
 
 
ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಗೌರಿ ಮೊಗೆರ್, ಕಾರ್ಯನಿರ್ವಾಹಣಾಧಿಕಾರಿ ಉದಯ ನಾಯ್ಕ, ಪುರಸಭೆ ಅಧ್ಯಕ್ಷ ಪರ್ವೇಝ್ ಕಾಸಿಮ್‌ಜಿ, ಡಿ.ವೈ‌ಎಸ್.ಪಿ ವೇದಮೂರ್ತಿ, ಮುಂತಾದವರು ಉಪಸ್ಥಿತರಿದ್ದರು. ತಹಸಿಲ್ದಾರ್ ಎಸ್.ಎಮ್. ನಾಯ್ಕ,. ಸ್ವಾಗತಿಸಿದರು. ತಾಲೂಕ ಕ್ಷೇತ್ರಶಿಕ್ಷಾಣಾಧಿಕಾರಿ ದೇವಿದಾಸ್ ಎಮ್. ಮೊಗೇರ್ ವಂದಿಸಿದರು. 

ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರನ್ನು ರಂಜಿಸಿದವು.

Share: