ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಪಡುಬಿದ್ರಿ: ಹೆಜಮಾಡಿಯ ಬಿಲ್ಲವ ಸಂಘದಿಂದ ನಿರ್ಮಾಣಗೊಂಡ ಸಭಾಗೃಹ ಉದ್ಘಾಟನೆಗೆ ಸಿದ್ಧ

ಪಡುಬಿದ್ರಿ: ಹೆಜಮಾಡಿಯ ಬಿಲ್ಲವ ಸಂಘದಿಂದ ನಿರ್ಮಾಣಗೊಂಡ ಸಭಾಗೃಹ ಉದ್ಘಾಟನೆಗೆ ಸಿದ್ಧ

Thu, 24 Dec 2009 02:51:00  Office Staff   S.O. News Service
ಪಡುಬಿದ್ರಿ, ಡಿಸೆಂಬರ್ 23: ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣ ಇದೇ ೨೫ ರಂದು ಉದ್ಘಾಟನೆಗೊಳ್ಳಲಿದೆ.
ಈ ಬಗ್ಗೆ ಹೆಜಮಾಡಿ ಬಿಲ್ಲವರ ಸಂಘದ ಕಛೇರಿಯಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್ ಹೇಳಿದರು.
ಅಂದು ಬೆಳಿಗ್ಗೆ ೧೦.೦೫ಕ್ಕೆ ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಸಂಘದ ನೂತನ ಕಟ್ಟಡದ ಉದ್ಘಾನೆ ಮಾಡಲಿರುವರು. ಜಯ ಸಿ. ಸುವರ್ಣ ಸಭಾಗೃಹವನ್ನು ರಾಜ್ಯ ಸಭಾ ಸದಸ್ಯ ಬಿ. ಕೆ. ಹರಿಪ್ರಸಾದ್, ಮೇಲಂತಸ್ತಿನಲ್ಲಿರುವ ಜಲಜ ಸೂರು ಬಿ. ಪೂಜಾರಿ ಅಡಿಟೋರಿಯಂನ್ನು ಉಡುಪಿ-ಚಿಕ್ಕಮಗಳೂರು ಸಾಂಸದ ಡಿ.ವಿ. ಸದಾನಂದ ಗೌಡ ಮತ್ತು ಸಂಘದ ಕಛೇರಿಯನ್ನು ಮಂಗಳೂರಿನ ಉದ್ಯಮಿ ಜೆ ವಿ. ಸೀತಾರಾಮ್ ನೆರವೇರಿಸಲಿದ್ದಾರೆ. 
 
ಸಭಾ ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮತ್ತು ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ಜಯ ಸಿ. ಸುವರ್ಣ ವಹಿಸಲಿದ್ದಾರೆ. ಶಿವಗಿರಿ ಮಠದ ಶ್ರೀ ಸತ್ಯಾನಂದ ಸ್ವಾಮೀಜಿ ಆಶೀರ್ವಚನವನ್ನು ನೀಡಲಿದ್ದಾರೆ.
 
ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಾಂಸದ ವಿನಯ್ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾ ಪಂ. ಅದ್ಯಕ್ಷೆ ಗ್ಲಾಡಿಸ್ ಅಲ್ಮೇಡಾ, ಮಾಜಿ ಸಚಿವ ವಸಂತ ವಿ. ಸಾಲಿಯಾನ್, ಮಾಜಿ ಶಾಸಕ ಸುನೀಲ್ ಕುಮಾರ್, ಅಕ್ಷಯ ಮಾಸಿಕ ಪತ್ರಿಕೆಯ ಸಂಪಾದಕ ಎಂ ಬಿ. ಕುಕ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ.
 
ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ೨೬ರಂದು ನಾಟಕ ಪ್ರದರ್ಶನ ಮತ್ತು ಮುಂಬೈಯ ಕಲಾ ಸೌರಭ ತಂಡದ ಪದ್ಮನಾಭ ಸಸಿಹಿತ್ಲು ನಿರ್ದೇಶನದಲ್ಲಿ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಲಿದೆ.
 
೨೭ರಂದು ಎಚ್. ಕೇಶವ ಕೋಟ್ಯಾನ್ ಸಂಯೋಜನೆಯಲ್ಲಿ ಸತ್ಯ ಕಾತಿನ ಬೈದೆರ್ ಎಂಬ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದೂ ವಾಸುದೇವ ಆರ್. ಕೋಟ್ಯಾನ್ ಗೋಷ್ಟಿಯಲ್ಲಿ ತಿಳಿಸಿದರು.
 
ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ದೊಂಬ ಪೂಜಾರಿ, ಕಾರ್ಯದರ್ಶಿ ಯೋಗೀಶ್ ಹೆಜ್ಮಾಡಿ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ಸಿ ಸಾಲ್ಯಾನ್, ನವೀಕರಣ ಸಮಿತಿಯ ಅಧ್ಯಕ್ಷ ಮಾಧವ ಎಸ್ ಸನಿಲ್, ಉಪಾಧ್ಯಕ್ಷ ತೇಜ್‌ಪಾಲ್ ಬಿ. ಸುವರ್ಣ, ಕಾರ್ಯದರ್ಶಿ ಎಚ್. ಜಿನರಾಜ್ ಬಂಗೇರ, ಹಾಗೂ ಸಮಿತಿಯ ಪರಮಾನಂದ ಸಾಲ್ಯಾನ್, ಪ್ರಭೋದ್, ಸುಭಾಸ್ ಸಾಲ್ಯಾನ್, ಹರೀಶ್ ಹೆಜ್ಮಾಡಿ, ದಾಮೋದರ್ ಬಂಗೇರ, ಪದ್ಮನಾಭ ಉಪಸ್ಥಿತರಿದ್ದರು.

ಚಿತ್ರ, ವರದಿ: ಹಮೀದ್, ಪಡುಬಿದ್ರಿ.


Share: