ಭಟ್ಕಳ, ಜನವರಿ 25:ಭಟ್ಕಳ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಿಜೆಪಿಯಲ್ಲಿ ಭಿನ್ನಮತವು ತಾರಕಕ್ಕೇರಿದ್ದು ಸುಮಾರು ಮೂರ್‍ನಾಲ್ಕು ಬಣಗಳಲ್ಲಿ ಹರಿದು ಹಂಚಿಹೊಗಿದೆ. ರವಾರದಂದು ಮಾಜಿ ಸಚಿವಾ ಶಿವಾನಂದ ನಾಯ್ಕರ ಬಣದಿಂದ ಇಲ್ಲಿನ ಬಾಜಪ ಕ್ಷೇತ್ರಾದ್ಯಕ್ಷರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು ಮತ್ತು ಇದು ಬಿಜೆಪಿಯ ಅಧಿಕೃತ ನಿರ್ಣಯ ಎಂಬುದಾಗಿ ತಿಳಿಸಲಾಗಿತ್ತು. ಆದರೆ ಇಂದು ಅದೇ ಪಕ್ಷದ ಸಂಸದ ಅನಂತ್ ಕುಮಾರ್ ಹೆಗಡೆ ಇಂದು ಹಟಾತ್ತನೆ ಭಟ್ಕಳಕ್ಕೆ ಭೇಟಿ ನೀಡಿ ರವಿವಾರದಂದು ಬಿಡುಗಡೆಗೊಂಡ ಕ್ಷೇತ್ರಾಧ್ಯಕ್ಷರ ಪಟ್ಟಿಗೆ ಸಂಬಂಧಿಸಿದಂತೆ ಇಲ್ಲಿನ ಹಲವಾರು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು ಮತ್ತು ಅದು ಅಧಿಕೃತವಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮುಂಚೆ ಮಾತನಾಡಿದ ಪಕ್ಷದ ಮುಖಂಡ ಗಣೇಶ ನಾಯ್ಕ ಮಾತನಾಡಿ ಕೆಲವರು ಬಿಜೆಪಿಯನ್ನು ತಮ್ಮ ಸ್ವಾರ್ಥಕ್ಕಾಗಿ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಇಲ್ಲಿ ಸೇರಿರುವುದು ನಿಷ್ಠಾವಂತ ಹಿರಿಯ ಕಾರ್ಯಕರ್ತರು ಎಂದು ಹೇಳಿದರು.
ಅನಂತ್ ಕುಮಾರ ಮಾತನಾಡಿ ಜಿಲ್ಲೆಯಲ್ಲಿ ಪಕ್ಷವು ವಿಪರೀತ ಬೆಳವಣೆಗೆಯನ್ನು ಕಂಡಿದ್ದು ಈಗ ಸ್ಥಾನಿಯ ಮಟ್ಟದಿಂದ ಹಿಡಿದು ರಾಜ್ಯಮಟ್ಟದ ವೆರಗೂ ಸಮಿತಿಗಳು ರಚನೆಯಾಗುತ್ತಿದ್ದು ಪಕ್ಷದ ನಿಷ್ಟಾವಂತರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು. ಭಟ್ಕಳದಲ್ಲಿ ರಚನೆಗೊಂಡ ಸಮತಿಯು ಇಲ್ಲಿನ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಚನೆಗೊಂಡಿದೆ ಎಂದ ಅವರು ಅವರು ಕಾರ್ಯಕರ್ತರ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಇದನ್ನು ಪುನರ್ ಪರಿಶೀಲಿಸಲಾಗುತ್ತಿದೆ. ಇಷ್ಟರಲ್ಲೆ ಅಚಿತಿಮಾ ತಿರ್ಮಾನ ಮಾಡುವವರಿದ್ದೇವೆ ಎಂದರು. ಭಟ್ಕಳದಲ್ಲಿ ಈಗಾಗಲೆ ಕ್ಷೇತ್ರಸಮಿತಿಯು ಮೂರ್‍ನಾಲಕ್ಕೂ ಬಾರಿ ರಚನೆಗೊಂಡಿದ್ದು ಇದುವರೆ ಯಾವುದೇ ಅಧಿಕೃತವಾಗದೆ ಇರುವುದು ಬಿಜೆಪಿಯ ವಿಶೇಷವಾಗಿದೆ.
ಭಟ್ಕಳದಲ್ಲಿ ಚರ್ಚುಗಳ ಮೇಲಾದ ದಾಳಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು ಶ್ರೀರಾಮ ಸೇನೆಗೂ ಸಂಘಪರಿವಾರಕ್ಕೂ ಯಾವುದೆ ಸಂಬಂಧವಿಲ್ಲ ಅದರಂತೆ ಬಿಜೆಪಿಗೂ ರಾಮಸೇನೆಗೂ ಯಾವುದೆ ಸಂಬಂಧವಿಲ್ಲ ಕೋಮುಗಲಭೆ ಸೃಷ್ಟಿಸುವ, ಸೌಹಾರ್ಧತೆಯನ್ನು ಕೆಡಿಸುವ ಯಾವುದೇ ಘಟನೆಯನ್ನು ನಾವು ಖಂಡಿಸುತ್ತೇವೆ ಎಂದರು. ಭಟ್ಕಳದ ಸಮುದ್ರ ಕಿನಾರೆಯಿಂದು ಸುಮಾರು ೨೨ ನಾಟಿಕಲ್ ಮೈಲು ದೂರಲ್ಲಿರುವ ನೇತ್ರಾಣಿಗುಡ್ಡವನ್ನು ಜೈವಿಕ ಸೂಕ್ಷ್ಮವಲಯ ಎಂದು ಘೋಷಿಸಿ ಅಲ್ಲಿ ಸಮರಾಭ್ಯಾಸವನ್ನು ನಿಲ್ಲಿಸಬೇಕು ಎಂದು ಈಗಾಲೆ ಸರಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದು ಇದನ್ನು ಸರ್ಕಾರವು ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದ ಅವರು ಅವರು ನೇತ್ರಾಣಿ ಗುಡ್ಡದಲ್ಲಿ ಅಮೂಲ್ಯ ಜೀವಿಗಳು ಇದ್ದು ಅವುಗಳ ರಕ್ಷಣೆಯಾಗಬೇಕು, ಇದರ ಸುತ್ತ ಹವಳ ಶಿಲೆಗಳು ವ್ಯಾಪಕ ಪ್ರಮಾಣದಲ್ಲಿವೆ ಎಂಬ ಮಾಹಿತಿ ಇದ್ದು ಅದರ ರಕ್ಷಣೆಯಾಗಬೇಕು ಅಲ್ಲಿ ಸಮರಾಭ್ಯಾಸ ಮಾಡುವುದರಿಂದ ಅಲ್ಲಿನ ಪಕ್ಷಿಸಂಕುಲಕ್ಕೆ ತೊಂದರೆಯಾಗುವು ಸಾದ್ಯತೆಗಳಿವೆ ಅದ್ದರಿಂದ ಅದನ್ನು ಜೈವಿಕ ಸೂಕ್ಷ್ಮವಲಯ ಎಂದು ಘೋಷಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂಧರ್ಭದಲ್ಲಿ ಕುಮಟಾದ ಎಮ್.ಜಿ.ಭಟ್, ಜಿ.ಪಂ ಸದಸ್ಯ ಎಮ್.ಎಮ್.ನಾಯ್ಕ,, ಸುಭದ್ರ ದೇವಾಡಿಗ, ಎಮ್.ವಿ. ಹೆಬ್ಳೆ, ಮುಂತಾದವರು ಉಪಸ್ಥಿತರಿದ್ದರು.