ಭಟ್ಕಳ, ಅ.27: ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಆಕ್ರಮವಾಗಿ ಕೋಣಗಳನ್ನು ಬಕ್ರೀದ್ ಹಬ್ಬಕ್ಕೆಂದು ಮುಂಬೈಯಿಂದ ಭಟ್ಕಳಕ್ಕೆ ಸಾಗಾಟ ಮಾಡುತ್ತಿದ್ದ ೭ ಕೋಣಗಳನ್ನು ಪತ್ತೆ ಹಚ್ಚಿದ ಗ್ರಾಮೀಣ ಠಾಣೆಯ ಪೋಲೀಸರು ವಾಹನ ಸಹಿತ ಕೋಣಗಳನ್ನು ವಶಕ್ಕೆ ತೆಗೆದುಕೊಂಡು ಅವುಗಳನ್ನು ಸಾಗಾಟ ಮಾಡುತ್ತಿದ್ದ ದ್ದ ಮೂವರನ್ನು ಬಂಧಿಸಿದ ಘಟನೆ ಇಂದು ಬೆಳಿಗ್ಗೆ ಜರುಗಿದೆ.
ಬಂಧಿತರನ್ನು ಮಹಾರಾಷ್ಟ್ರದ ಇರ್ಶಾದ್ ಸಿದ್ದಿಕ್, ಕುರ್ಲಾದ ಸಯ್ಯದ್ ಬಿಲಾಲ್ ಹಾಗೂ ಭಟ್ಕಳದ ಮಹ್ಮದ್ ಅಮೀನ ಎಂದು ಗುರುತಿಸಲಾಗಿದೆ. ಇವರು ಮಹಾರಾಷ್ಟ್ರದಿಂದ ಭಟ್ಕಳಕ್ಕೆ ಲಾರಿಯಲ್ಲಿ ೭ ಉತ್ತಮ ತಳಿಯ ಕೋಣಗಳನ್ನು ಯಾವುದೇ ಪಾಸ್‌ಪರ್ಮಿಟ್ ಇಲ್ಲದೇ ಒಂದೇ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು ಖಚಿತ ಮಾಹಿತಿಯನ್ನಾಧರಿಸಿ ಪೋಲಿಸರು ಶಿರಾಲಿ ಚೆಕ್ ಪೋಸ್ಟಬಳಿ ಲಾರಿಯನ್ನು ತಡೆದು ಪರೀಶಿಲಿಸಲಾಗಿ ಅದರಲ್ಲಿ ಮುಂಬೈಯಿಂದ ತಂದ 7 ಕೋಣಗಳು ಇದ್ದುದ್ದನ್ನು ಗಮನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳೂ ಕೋಣಗಳನ್ನು ಗ್ರಾಮೀಣ ಠಾಣೆಯ ಮುಂಬದಿಯ ಸ್ಥಳದಲ್ಲಿ ಸುರಕ್ಷಿತವಾಗಿ ಇಡಲಾಗಿದೆ.
ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ