ಭಟ್ಕಳ:೩೦,ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೋರ್ವ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದ ಘಟನೆ ಇಂದು ಗ್ರಾಮೀಣ ಪೋಲಿಸ್ ಠಾu ವ್ಯಾಪ್ತಿಯಲ್ಲಿ ಜರುಗಿದ್ದು ಮೃತ ಮೀನುಗಾರನನ್ನು ಬೆಳ್ನಿಯ ನಿವಾಸಿ ದುರ್ಗಪ್ಪ ನಾಯ್ಕ್ (೪೬) ಎಂದು ಗುರುತಿಸಲಾಗಿದೆ.
ಈತನು ಗುರುವಾರ ರಾತ್ರಿ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದು ರಾತ್ರಿ ಸಮಯದಲ್ಲಿ ಆಯ ತಪ್ಪಿ ಸಮುದ್ರಕ್ಕೆ ಬಿದ್ದ ಎನ್ನಲಾಗಿದ್ದು ಆತನ ಶವವು ಇಂದು ಶುಕ್ರವಾರ ಮಧ್ಯಾಹ್ನ ೧೨ ಗಂಟೆ ಸುಮಾರು ಇಲ್ಲಿನ ಬಂದರ್ ಸಮುದ್ರ ಕಿನಾರೆಯಲ್ಲಿ ದೊರಕಿದೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತದೇಹವನ್ನು ಅವರ ಮನೆಯವರಿಗೆ ನೀಡಲಾಗಿದೆ.