ಸಕಲೇಶಪುರ, ಜನವರಿ ೨೧: ಸ್ಥಳೀಯ ಪತ್ರಿಕೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆಟೋ ಚಾಲಕರ ಬಗ್ಗೆ ಅಸಂಬದ್ಧ ಹಾಗೂ ಅಶ್ಲೀಲ ವರದಿಪ್ರಕಟವಾಗಿದೆ ಎಂದು ಆರೋಪಿಸಿ, ಗುರುವಾರ ಪಟ್ಟಣದಲ್ಲಿ ಆಟೋ ಚಾಲಕ ಹಾಗೂ ಮಾಲಿಕರ ಸಂಘದ ಕಾರಯಕರ್ತರು ಪ್ರತಿಭಟನೆ ನಡೆಸಿದರು.
ಕಳೆದ ಭಾನುವಾರ ಸ್ಥಳೀಯ ಪತ್ರಿಕೆಯಲ್ಲಿ(ಜ್ಞಾನದೀಪ) ಆಟೋ ಚಾಲಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ತಮ್ಮ ಆಟೋರಿಕ್ಷಗಳನ್ನು ಚಾಲನೆ ಮಾಡದೆ ಸಾರ್ವಜನಿಕ ಸೇವೆಯನ್ನು ಸ್ಥಗಿತಗೊಳಿಸಿದರು ಪಟ್ಟಣದ ಪ್ರವಾಸಿ ಮಂದಿರ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತೆರಳಿ, ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಬಹಿರಂಗ ಸಬೆ ನಡೆಸಿದರು.
ಸಾರ್ವಜನಿಕರು ಹಾಗೂ ಹೆಣ್ಣು ಮಕ್ಕಳ ಜೊತೆ ಆಟೋ ಚಾಲಕರು ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ ಎಂಬ ಅಸಂಬದ್ಧ ಸುದ್ದಿಯನ್ನು ಪತ್ರಿಕೆ ಪ್ರಕಟಿಸಿದೆ ಇಲ್ಲಿಯವರೆಗೆ ಪಟ್ಟಣದಲ್ಲಿ ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಹಾಗೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ ಇಂತಹ ವರದಿ ಪ್ರಕಟಿಸಿರುವ ಪತ್ರಿಕೆಯ ಸಂಪಾದಕ ಬಿ.ಜೆ.ಮಣಿ ಅವರು, ಆಟೋ ಚಾಲಕರ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಕಲ್ಪಿಸಿ ಶಾಂತಿ ಕದಡಲು ಪ್ರಯತ್ನಿಸಿದ್ದಾರೆ ಈ ದುರುದ್ದೇಶ ಹೊಂದಿರುವ ಬಿ.ಜೆ.ಮಣಿ ಕೂಡ ಪತ್ರಿಕೆಯನ್ನು ಮುಂದಿಟ್ಟುಕೊಂಡು ಸಮಾಜ ಘಾತುಕ ಚಟುವಟಿಕೆ ನಡೆಸುತ್ತಿದ್ದಾರೆ ಹಳೆಯ ಬಸ್ ನಿಲ್ದಾಣ ಎದುರು ಇರುವ ಪುರಸಭೆಗೆ ಸೇರಿದ ಹೇಮಾವತಿ ಕಾಂಪ್ಲೆಕ್ಸ್ಅಲ್ಲಿ ಅಕ್ರಮವಾಗಿ ಇಸ್ಪೀಟ್ ಕ್ಲಬ್ ನಡೆಸುತ್ತಿದ್ದಾರೆ ದಿನದ 24 ಗಂಟೆ ಕ್ಲಬ್ ನಡೆಯುತ್ತದೆ ಇದರಿಂದಾಗಿ ಅನೇಕ ಸಂಸಾರಗಳು ಹಾಳಾಗಿವೆ. ಊರಿನಲ್ಲಿ ಕಳ್ಳತನದರೊಡೆ ನಡೆಯುತ್ತಿದ್ದು ಯುವಜನಾಂಗ ಹಾದಿ ತಪ್ಪುತ್ತಿದೆ ಈ ಕೂಡಲೆ ಜಿಲ್ಲಾದಿಕಾರಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಾದಿಕಾರಿ ಕ್ರಮ ಕೈ ಗೊಳ್ಳ ಬೇಕು, ಕೆಲವೆಡೆ ಹೇಮಾವತಿ ನದಿಯಲ್ಲಿ ಮರಳು ದಂಧೆಯನ್ನು ನಡೆಸುತ್ತಿರುವ ಈತನ ವಿರುದ್ಧ ಕೂಡಲೆ ಕ್ರಮ ಕೈಗೊಳ್ಳಬೇಕು ಪತ್ರಿಕೆಯಲ್ಲಿ ಪದೇ ಪದೆ ಇಲ್ಲಸಲ್ಲದ ವರದಿ ಪ್ರಕಟಿಸಿ ಸಮಾಜದಲ್ಲಿ ಶಾಂತಿ ಕದಡುತ್ತಿರುವ ಇವರ ಮೇಲೆ ಕ್ರಮಿನಲ್ ಮೊಖದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ತಹಸಿಲ್ದಾರ್ ಚಂದ್ರಮ್ಮ ಅವರಿಗೆ ಮನವಿ ಸಲ್ಲಿಸಿದರು. ನಂತರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರಯಕರ್ತರು ಹೇಮಾವತಿ ಕಾಂಪ್ಲೆಕ್ಸ್ಅಲ್ಲಿ ಅಕ್ರಮವಾಗಿ ನಡೆಯುತ್ತಿರುವ ಇಸ್ಪೀಟ್ ಕ್ಲಬ್^ನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪುರಸಭೆ ಅಧ್ಯಕ್ಷ ಯಾದ್ಗಾರ್ ಇಬ್ರಾಹಿಂ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಆಟೋ ಚಾಲಕ ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಬೈಕೆರೆ ದೇವರಾಜ್, ಉಪಾಧ್ಯಕ್ಷ ತಜಮೂಲ್, ರಮೇಶ್ ಹಾಗೂ ಸತೀಶ್ ಮುಂತಾದವರು ನೇತೃತ್ವ ವಹಿಸಿದ್ದರು.
ತುರ್ತು ಸಂದರ್ಭದಲ್ಲಿ ಉಚಿತ ಸೇವೆ ಸಲ್ಲಿಸಲು ಎರಡು ರಿಕ್ಷಾಗಳನ್ನು ವ್ಯವಸ್ಥೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಯಿತು.