ರಾಷ್ಟ್ರೀಯ ಯುವಪಡೆಗೆ ಅರ್ಜಿ ಆಹ್ವಾನ
ಮೈಸೂರು, ಏ. ೨೦ - ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಕ/ಯುವತಿಯರಿಗಾಗಿ “ರಾಷ್ಟ್ರೀಯ ಯುವ ಪಡೆ (ದಳ)” ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಯೋಜನೆಯ ಉದ್ದೇಶ ಯುವಜನರನ್ನು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು. ಇದರ ಅನ್ವಯ ದೇಶದಾದ್ಯಂತ ಇಪ್ಪತ್ತು ಸಾವಿರ ಯುವಜನರನ್ನು “ರಾಷ್ಟ್ರೀಯ ಯುವ ಪಡೆ” ಪೂರ್ಣ ಪ್ರಮಾಣದಲ್ಲಿ ೨ ವರ್ಷಗಳ ಅವಧಿಗೆ ನಿಯೋಜಿಸಿಕೊಳ್ಳಲಾಗುತ್ತಿದೆ. ಆಯ್ಕೆಯಾದವರಿಗೆ ಸೂಕ್ತ ಗೌರವ ಧನ, ವಿಶೇಷ ತರಬೇತಿ ಹಾಗೂ ಸಮವಸ್ತ್ರ ನೀಡಲಾಗುವುದು.
ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ೦೭ ತಾಲ್ಲೂಕುಗಳಿಂದ ೧೪ ಜನ ಯುವಕ/ಯುವತಿಯರನ್ನು ಪ್ರತಿ ತಾಲ್ಲೂಕಿಗೆ ಇಬ್ಬರಂತೆ “ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರಾಗಿ ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ಈ ಕೆಳಕಂಡ ಅರ್ಹತೆಗಳನ್ನು ಹೊಂದಿರುವವರು ಕೆಳಕಂಡ ನಿಬಂಧನೆಗೆ ಒಳಪಟ್ಟು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಕನಿಷ್ಟ ೧೮ ವರ್ಷದಿಂದ ಗರಿಷ್ಟ ೨೫ ವರ್ಷದ ವ್ಯಾಪ್ತಿಯೊಳಗಿರಬೇಕು. ಕನಿಷ್ಟ ವಿದ್ಯಾರ್ಹತೆ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಾಗಿರಬೇಕು. ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಯಾವುದೇ ಕಾರಣದಿಂದ ಅರ್ಜಿ ಸಲ್ಲಿಸಲು ಅರ್ಹರಲ್ಲ. ಈಗಾಗಲೇ ಸ್ವಯಂ ಸೇವಕರಾಗಿ ಹಿಂದಿನ ಯೋಜನೆಗಳಲ್ಲಿ ಸೇವೆ ಸಲ್ಲಿಸಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಯುವಕ/ಯುವತಿ/ ಮಹಿಳಾ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವವರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲಾಗುವುದು. ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಎನ್.ಸಿ.ಸಿ.ಯಲ್ಲಿ ಪಾಲ್ಗೊಂಡಿರುವವರಿಗೆ ಆದ್ಯತೆ ಇದೆ. ನಿಯಮಾನುಸಾರ ಯುವತಿಯರಿಗೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ಇದೆ. ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ವಿಶೇಷ ಆದ್ಯತೆ ಇದೆ. “ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರ ಸೇವಾ ಅವಧಿ ೨ ವರ್ಷಗಳು ಮಾತ್ರ. “ರಾಷ್ಟ್ರೀಯ ಯುವ ಪಡೆ”ಯ ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಮಾಹೆಯಾನ ರೂ.೨೫೦೦/ ಗೌರವಧನ ನೀಡಲಾಗುವುದು. ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯು ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳ ಸಂದರ್ಶನವನ್ನು ನಡೆಸಿ ಆಯ್ಕೆಯನ್ನು ಘೋಷಿಸಲಿದೆ. ಮೈಸೂರು ಜಿಲ್ಲೆಯ ವ್ಯಾಪ್ತಿಯ ಎಲ್ಲಾ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಯುವಕ/ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇಚ್ಚಿಸುವ ಯುವಕ/ಯುವತಿಯರು ನಿಗಧಿತ ಅರ್ಜಿ ನಮೂನೆಯನ್ನು ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ನಂ.೨೬/ಎ, ಇಂಡಸ್ಟ್ರಿಯಲ್ ಸಬರ್ಬ್, ೩ನೇ ಹಂತ, ರಾಜರಾಜೇಶ್ವರಿ ದೇವಸ್ಥಾನದ ರಸ್ತೆ, ವಿಶ್ವೇಶ್ವರನಗರ, ಮೈಸೂರು-೮ ಇವರಿಂದ ಕಾರ್ಯಾಲಯದ ಕೆಲಸದ ವೇಳೆಯಲ್ಲಿ ಪಡೆದು ಅಥವಾ ಎನ್.ವೈ.ಕೆ. ವೆಬ್ಸೈಟ್ ತಿತಿತಿ.ಟಿಥಿಞs.oಡಿg . ಡೌನ್ಲೋಡ್ ಮಾಡಿಕೊಂಡು ದಿನಾಂಕ ೧೯.೦೪.೨೦೧೦ರ ಸೋಮವಾರದಂದು ಸಂಜೆ ೫ ಗಂಟೆಯವರೆಗೆ ಅರ್ಜಿ ಸಲ್ಲಿಸಲು ವಿನಂತಿಸಲಾಗಿತ್ತು. ಆದರೆ ಕಾರಣಾಂತರದಿಂದ ಅರ್ಜಿ ಸಲ್ಲಿಸಲು ಅವಧಿಯನ್ನು ದಿನಾಂಕ ೨೭.೦೪.೨೦೧೦ರಂದು ಸಂಜೆ ೫ ಗಂಟೆಯವರೆವಿಗೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗೆ ೦೮೨೧-೨೪೮೯೮೫೮ ಅಥವಾ ೨೪೮೯೮೫೩ ದೂರವಾಣಿಯನ್ನು ಸಂಪರ್ಕಿಸಲು ಮೈಸೂರು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಶ್ರೀ ಎಂ.ಎನ್. ನಟರಾಜ್ ತಿಳಿಸಿದ್ದಾರೆ.