ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಕರಾವಳಿ ರಕ್ಷಣಾ ಪಡೆ ಕಚೇರಿ ಉದ್ಘಾಟನೆ : ವಿಜಿತ್ ನೌಕೆ ಲೋಕಾರ್ಪಣೆ

ಕಾರವಾರ: ಕರಾವಳಿ ರಕ್ಷಣಾ ಪಡೆ ಕಚೇರಿ ಉದ್ಘಾಟನೆ : ವಿಜಿತ್ ನೌಕೆ ಲೋಕಾರ್ಪಣೆ

Thu, 05 Nov 2009 15:03:00  Office Staff   S.O. News Service

ಕಾರವಾರ, ನ.4: ಇಲ್ಲಿನ ಅರಗಾದಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್) ಕಚೇರಿ ಬುಧವಾರ ಉದ್ಘಾಟನೆಗೊಂಡಿತು. ಕರ್ನಾಟಕದಲ್ಲಿ ಕೋಸ್ಟ್‌ಗಾರ್ಡ್‌ನ ಎರಡನೇ ಕಚೇರಿ ಇದಾಗಿದ್ದು, ದಳದ ಮಹಾ ನಿರ್ದೇಶಕ ವೈಸ್ ಎಡ್ಮಿರಲ್ ಅನಿಲ್ ಚೋಪ್ಡಾ ಉದ್ಘಾಟಿಸಿದರು. ಶೀಘ್ರದಲ್ಲಿ ಕರಾವಳಿ ರಕ್ಷಣಾ ಪಡೆ ಕರಾವಳಿ ರಕ್ಷಣೆಗೆ ಸರ್ವ ಸನ್ನದ್ಧವಾಗಲಿದೆ ಎಂದು ಅವರು ಹೇಳಿದರು.

ಕರಾವಳಿ ರಕ್ಷಣಾ ಪಡೆಗಾಗಿ 83 ಹೊಸ ನೌಕೆಗಳು ಬೇರೆ ಬೇರೆ ಶಿಪ್‌ಯಾರ್ಡ್‌ಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. 45ವಿಮಾನಗಳನ್ನು ಹೊಂದಲಿದೆ. ಅಲ್ಲದೇ ಸಿಬಂದಿಗೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತದೆ ಎಂದು ವಿವರಿಸಿದರು. ಮುಂಬಯಿಯಲ್ಲಿ ಉಗ್ರರ ದಾಳಿಯ ಬಳಿಕ ಕರಾವಳಿ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

‘ವಿಜಿತ್'ಲೋಕಾರ್ಪಣೆ

ಕಾರವಾರ, ನ. ೪: ಕರಾವಳಿ ರಕ್ಷಣೆಯ ಉದ್ದೇಶದಿಂದ ಇನ್ನು ಕೆಲವೇ ವರ್ಷದಲ್ಲಿ ಕರಾ ವಳಿ ರಕ್ಷಣಾ ಪಡೆ ೧೫ ಕಚೇರಿಗಳನ್ನು ಸಮುದ್ರ ತಟದುದ್ದಕ್ಕೂ ತೆರೆಯಲಾಗುವುದು ಎಂದು ಭಾರತೀಯ ತಟರಕ್ಷಕ ದಳದ ಮಹಾ ನಿರ್ದೇಶಕ ಅನಿಲ್ ಚೋಪ್ಡಾ ತಿಳಿಸಿದರು. ಇಲ್ಲಿನ ನೌಕಾನೆಲೆ ಶಿಪ್ ರಿಪೇರ್ ಯಾರ್ಡ್‌ನಲ್ಲಿ ಇಂದು ಏರ್ಪಾಟಾಗಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಗಾಗಿ ಗೋವಾ ಶಿಪ್ ಯಾರ್ಡ್ ನಿರ್ಮಿಸಿರುವ ಗಸ್ತು ನೌಕೆ ಸಿಜಿ‌ ಎಸ್ ‘ವಿಜಿತ್’ನ ಲೋಕಾರ್ಪಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತ ನಾಡಿದರು.

ಮುಂಬೈ ದಾಳಿಯ ನಂತರ ಭಾರತೀಯ ತಟ ರಕ್ಷಕ ದಳದ ಜವಾಬ್ದಾರಿ ಇನ್ನೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಆಸ್ಥೆ ವಹಿಸಿ ಪಡೆ ಕಾರ್ಯನಿರ್ವಹಿಸುತ್ತಿದ್ದು ಇನ್ನು ಎರಡೇ ವರ್ಷ ದಲ್ಲಿ ಸರ್ವ ಸನ್ನದ್ಧವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇಂದು ನೌಕಾ ನಿರ್ಮಾಣ ಕ್ಷೇತ್ರ ಅತ್ಯಾಧುನಿಕವಾಗಿದೆ. ದೇಶದಲ್ಲಿರುವ ಹಲವು ನೌಕಾ ನಿರ್ಮಾಣ ಸಂಸ್ಥೆಗಳಲ್ಲಿ ಗೋವಾ ಶಿಪ್ ಯಾರ್ಡ್ ಮೊದಲ ಪಂಗ್ತಿಯಲ್ಲಿದೆ ಎಂದು ಶ್ಲಾಘಿಸಿದರು. ಗೋವಾ ಶಿಪ್‌ ಯಾರ್ಡ್ ಸಹಕಾರದಿಂದ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ನೌಕೆಗಳನ್ನು ಕೋಸ್ಟ್‌ ಗಾರ್ಡ್‌ಗೆ ಪಡೆದುಕೊಳ್ಳುವ ಭರವಸೆ ವ್ಯಕ್ತಪಡಿಸಿದರು.

 ಸೌಜನ್ಯ: ಉದಯವಾಣಿ


Share: