ಭಟ್ಕಳ, ಅಕ್ಟೋಬರ್ 5: ಕಡವೆ ಮಾಂಸ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಅರಣ್ಯಾಧಿಕಾರಿಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದ ಘಟನೆ ಕೊಪ್ಪ ಗ್ರಾಮಪಂಚಾಯತ ವ್ಯಾಪ್ತಿಯ ಬೇಳೂರುಮನೆ ಭಾಗದಲ್ಲಿ ರವಿವಾರ ರಾತ್ರಿ ನಡೆದಿದೆ.
ಬಂಧಿತ ಆರೋಪಿಗಳನ್ನು ಅನಂತ ಯೇಲು ಮರಾಠೆ, ಗೋವಿಂದ ಯೇಲು ಮರಾಠೆ, ಶಿವು ಭತ್ಯಾ ಮರಾಠೆ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಕೆಜಿ ಕಡವೆ ಮಾಂಸವನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಭಟ್ಕಳ ಎಸಿಫ್ ತಾಂಡೇಲ ಹಾಗೂ ಆರ್‌ಎಫ್‌ಓ ಎಮ್.ಜಿ.ನಾಯ್ಕ ನಿರ್ದೇಶನದ ಮೇರೆಗೆ ಶಿರಾಲಿ ಶಾಖಾ ವನಪಾಲಕ ಜಿ.ಎಸ್.ನಾಯ್ಕ, ಗಸ್ತು ಅರಣ್ಯ ಪಾಲಕ ಸಂತೋಷ ತೆಂಗಳ, ಬಿ.ಎನ್.ಬಂಕಾಪುರ, ಗಸ್ತು ಅರಣ್ಯ ರಕ್ಷಕ ಗೋಳಿ ಕುಂಬಿ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.