ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ರಾಜ್ಯದೊಳಗಣ ಜಾನುವಾರು ಸಾಗಾಣಿಕೆಗೆ ಪರವಾನಿಗೆ ಅಗತ್ಯವಿಲ್ಲ - ನ್ಯಾಯವಾದಿ ಮಜೀದ್ ಖಾನ್

ಭಟ್ಕಳ: ರಾಜ್ಯದೊಳಗಣ ಜಾನುವಾರು ಸಾಗಾಣಿಕೆಗೆ ಪರವಾನಿಗೆ ಅಗತ್ಯವಿಲ್ಲ - ನ್ಯಾಯವಾದಿ ಮಜೀದ್ ಖಾನ್

Sun, 22 Nov 2009 17:38:00  Office Staff   S.O. News Service
ಭಟ್ಕಳ:22,ರಾಜ್ಯದ ಗಡಿಯೊಳಗೆ ಯಾವುದೆ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಸಾಗಿಸಬಹುದು ಎಂದು ಮಂಗಳೂರಿನ ನ್ಯಾಯವಾದಿ‌ಅಬ್ದುಲ್ ಮಜೀದ್ ಖಾನ್ ಹೇಳಿದರು ಅವರು ಇಂದು ಇಲ್ಲಿನ ರಾಬಿತಾ ಹಾಲ್ ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡ ಕಾನೂನು ಜಾಗೃತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಜ್ಯದ ಗಡಿಯೊಳಗೆ ದನಗಳನ್ನು ಅಂದರೆ ಎತ್ತು, ಎಮ್ಮೆ, ಕೋಣಗಳನ್ನು ಸಾಗಿಸಲು ಯಾರ ಪರವಾನಿಗೆ ಅಥವಾ ಅನುಮತಿ ಬೇಕಾಗಿಲ್ಲ ಆಕಳು(ಗೋವು) ಹಾಗೂ ಅದರ ಕರುವನ್ನು ಮಾತ್ರ ಅನುಮತಿಯಿಲ್ಲದೆ ಸಾಗಿಸಲು ಬರುವುದಿಲ್ಲ ಎಂದ ಅವರು ನಮ್ಮ ಜನರು ಕಾನೂನನ್ನು ಅರಿಯದಿರುವುದೆ ಪೋಲಿಸರು ಜಾನುವಾರುಗಳನ್ನು ಹಿಡಿದು ಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡುವಂತಾಗಿದೆ ಅದಕ್ಕಾಗಿ ನಾವು ಕಾನೂನು ಶಿಬಿರಗಳ ಮೂಲಕ ಕಾನೂನನ್ನು ಅರಿಯಬೇಕಾಗಿದೆ ಎಂದರು. ದನಗಳ ಸಾಗಟದ ಹೆಸರಲ್ಲಿ ಅಮಾಯಕರ ಮೇಲೆ ದೌರ್ಜನ್ಯವನ್ನು ಎಸಗಲಾಗುತ್ತಿದೆ. ದನಗಳನ್ನು ಹಿಡಿದು ಗೋವುಗಳನ್ನು ಹಿಡಿದ್ದಿದ್ದೇವೆ ಎಂದು ಪ್ರಕರಣವನ್ನು ದಾಖಲು ಮಾಡಲಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.  ಅಲ್ಲದೆ ಪಾಸ್ ಪೋರ್ಟ ಮತ್ತಿತರ ವಿಷಯಗಳ ಕುರಿತು ಜನರು ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದ ಅವರು ಪಾಸ್ ಪೋರ್ಟ ನೀಡುವಲ್ಲಿ ಆಗುತ್ತಿರುವ ವಿಳಂಬದ ಕುರಿತು ಸರಕಾರದ ಗಮನವನ್ನು ಸೆಳೆಯಬೇಕು ಇದನ್ನು ವಿಳಂಬ ಮಾಡುವಂತಿಲ್ಲ ಎಂದರು.
 
22-bkl-02.jpg 
 
 ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಮಾನವ ಹಕ್ಕು ಹೋರಾಟಗಾರ  ಮುಹಮ್ಮದ್ ತಾಹಿರ್ ಮಾತನಾಡಿ ಇಂದು ಮಾಹಿತಿ ಹಕ್ಕು ನಿಯಮವು ಎಲ್ಲರಿಗೂ ಅನುಕೂಲಕರವಾದ ವಾತವರಣವನ್ನು ನಿರ್ಮಿಸಿದೆ ನಾವು ನಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಹಾಗೆಯೆ ಯಾವುದೆ ರೀತಿಯ ಸರಕಾರಿ ದೌರ್ಜನ್ಯವನ್ನು ಪ್ರಶ್ನಿಸುವ ಹಕ್ಕು ನಮಗಿದ್ದು ಇಂತಹ ಶಿಬಿರಗಳಿಂದ ಜನಸಾಮಾನ್ಯರು ಪ್ರಯೋಜನವನ್ನು ಪಡೆಯಬೇಕಾಗಿದೆ ಎಂದರು.ಭಟ್ಕಳ ಪುರಸಭೇಯ ಮಾಜಿ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮುಖ್ಯ‌ಅತಿಥಿಯಾಗಿದ್ದರು.

ಸ್ಥಳೀಯ ಅಧ್ಯಕ್ಷ ಅಮ್ಜದ್ ಶಿರಾಲಿ ಪ್ರಸ್ಥಾವಿಕವಾಗಿ ಮಾತನಾಡಿದರು. ಸಿರಾಜ್ ಕಾರ್ಯಕ್ರಮವನ್ನು ನರೂಪಿಸಿದರು.


Share: