ಭಟ್ಕಳ, ಫೆಬ್ರವರಿ ೭: ನಿನ್ನೆ ರಾತ್ರಿ ಸುಮಾರು ಒಂಭತ್ತೂವರೆಯ ಹೊತ್ತಿನಲ್ಲಿ ಅಡ್ಡ ಬಂದ ನಾಯಿಯ ಮೇಲೆ ಹಾದು ಹೋದ ಬೈಕ್ ಉರುಳಿದ ಪರಿಣಾಮವಾಗಿ ಸವಾರರಾದ ರುಕ್ನುದ್ದೀನ್ ಮೊಹಮ್ಮದ್ ಇಬ್ರಾಹಿಂ (ಲಡ್ಕಾ ಇಬ್ರಾಹಿಂ) ರವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಭಟ್ಕಳ ಗ್ರಾಮಾಂತರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೆಳನಿಯಲ್ಲಿ ಈ ಘಟನೆ ನಡೆದಿದ್ದು ಇಬ್ರಾಹಿಂ ರವರ ಕಾಲಿನ ಮೂಳೆ ಮುರಿದಿದೆ ಹಾಗೂ ತಲೆಗೂ ಪೆಟ್ಟಾಗಿದೆ.
ಅವರನ್ನು ಕೂಡಲೇ ಭಟ್ಕಲ ವೆಲ್ಫೇರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಥಮ ಚಿಕಿತ್ಸೆಯ ಬಳಿಕ ಮುರ್ಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿಗೆ ಕೊಂಡೊಯ್ಯಲಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.