ಭಟ್ಕಳ, ಭಟ್ಕಳ ಮುಸ್ಲಿಮ್ ಯುತ್ ಫೆಡರೇಷನ್ ವತಿಯಿಂದ ರವಿವಾರ ಇಲ್ಲಿನ ಮಜ್ಲಿಸೆ-ಇಸ್ಲಾಹ್-ವ-ತಂಝೀಮ್ ನ ಸಭಾಂಗಣದಲ್ಲಿ ಒಂದು ದಿನದ ಕಾನೂನು ಜಾಗೃತಿ ಕಾರ್ಯಗಾರವು ತಂಝೀಮ್ ಮಾಜಿ ಅಧ್ಯಕ್ಷ ಹಾಗೂ ನ್ಯಾಯವಾದಿ ಕಾಝಿಆ ಮುಹಮ್ಮದ್ ಮುಝಮ್ಮಿಲ್ ರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಕಾರ್ಯಗಾರದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯವಾದಿಗಳಾದ ಮುಷ್ತಾಖ್ ಆಹ್ಮದ್ ಮಾಲ್ವಿ, ಉಸ್ಮಾನ್ ಶೇಖ್, ರಿಯಾಝ್ ಆಹ್ಮದ್ ಖಾನ್ ಭಾಗವಹಿಸಿ ಮಾನವ ಹಕ್ಕುಗಳು, ಪ್ರಜೆಗಳ ಹಕ್ಕು ಮತ್ತು ಕರ್ತವ್ಯ, ಗುರುತಿನ ಚೀಟಿಯ ಮಹತ್ವ ಮತ್ತು ಪ್ರಯೋಜನ ಮುಂತಾದ ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನುಂಟು ಮೂಡಿಸಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಯುತ್ ಫೆಡರೇಷನ್ ಅಧ್ಯಕ್ಸ ಮೌಲಾನ ಮುಹಮ್ಮದ್ ಅನ್ಸಾರ್ ಮದನಿ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಮ್.ಜೆ. ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಗಾರದ ಉದ್ದೇಶ ಹಾಗೂ ಫೆಡೆರಷನ್ ಪರಿಚಯವನ್ನು ಎಸ್.ಎಮ್. ಇರ್ಫಾನ್ ನದ್ವಿ ಮಾಡಿದರು.
ವೇದಿಕೆಯಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಜೆ. ಸೈಯ್ಯದ್ ಖಾಲಿದ್, ಪುರಸಭಾ ಸದಸ್ಯ ಹಾಗೂ ತಂಝೀಮ್ ಜತೆ ಕಾರ್ಯದರ್ಶಿ ಇನಾಯತುಲ್ಲಾ ಶಾಬಂದ್ರಿ, ಎಸ್.ಎಮ್. ಸೈಯ್ಯದ್ ಪರ್ವೇಝ್, ಮುಹಮ್ಮದ್ ಅಝೀಮ್ ಮೊಹತೆಶಮ್, ಉಪಸ್ಥಿತರಿದ್ದರು. ಮುಬಷ್ಶಿರ್ ಹಲ್ಲಾರೆ ಹಾಗೂ ಡಾ. ಆಫಾಖ್ ಲಂಕಾ ಕಾರ್ಯಕ್ರಮವನ್ನು ನಿರ್ವವಹಿಸಿದರು. ಅಬ್ದುಲ್ ವಹಾಬ್ ಕೋಲಾ ವಂದಿಸಿದರು.