ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಕ್ರೈಸ್ತ ಮಹಿಳೆಯ ಮೇಲೆ ಹಲ್ಲೆ - ರಸ್ತೆಗಿಳಿದು ಪ್ರತಿಭಟಿಸಿದ ಮಹಿಳೆಯರು

ಮಂಗಳೂರು: ಕ್ರೈಸ್ತ ಮಹಿಳೆಯ ಮೇಲೆ ಹಲ್ಲೆ - ರಸ್ತೆಗಿಳಿದು ಪ್ರತಿಭಟಿಸಿದ ಮಹಿಳೆಯರು

Tue, 15 Dec 2009 03:09:00  Office Staff   S.O. News Service
ಮಂಗಳೂರು, ಡಿ.14: ಕುಲಶೇಖರ ಚರ್ಚ್‌ಗೆ ತಾಗಿಕೊಂಡಿರುವ ಅಂಗಡಿಯ ಮಾಲಕರೊಬ್ಬರು ಕ್ರೈಸ್ತ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಇಂದು ಕುಲಶೇಖರ ಚರ್ಚ್ ವ್ಯಾಪ್ತಿಯ ಕ್ರೈಸ್ತ ಮಹಿಳೆಯರು ಚರ್ಚ್‌ನೆದುರು ಪ್ರತಿಭಟನೆ ನಡೆಸಿದರು. 

ಮಾರಿಯಸ್ ಪಿಂಟೋ(56) ಎಂಬವರು ಇಂದು ಬೆಳಗ್ಗೆ ಕುಲಶೇಖರ ಚರ್ಚ್‌ಗೆ ಪ್ರಾರ್ಥನೆಗೆ ಬಂದು ಹಿಂತಿರುಗುವ ವೇಳೆ ಚರ್ಚ್ ಸಮೀಪದ ಅಂಗಡಿಗೆ ತೆರಳಿದ್ದ ಸಂದರ್ಭ ಅವರ ಮೇಲೆ ಅಂಗಡಿ ಮಾಲಕ ಕ್ಲಿಫರ್ಡ್ ಡಿಸೋಜಾ ಎಂಬವರು ಹಲ್ಲೆ ನಡೆಸಿರುವುದಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಗಾಯಗೊಂಡಿರುವ ಮಾರಿಯಸ್ ಪಿಂಟೋ ಅವರು ಪ್ರಸ್ತುತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share: