ಭಟ್ಕಳ, ಅಕ್ಟೋಬರ್ 5: ಚೀಲದಲ್ಲಿ ಸ್ಪೋಟಕಗಳನ್ನು ತುಂಬಿಸಿಕೊಂಡು ಸಾಗಿಸುವ ಯತ್ನದಲ್ಲಿದ್ದ ವ್ಯಕ್ತಿಯೋರ್ವನನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರವಿವಾರ ರಾತ್ರಿ ೧೦.೪೫ರ ಸುಮಾರಿಗೆ ಅಳ್ವೇಕೋಡಿ ಸಣಬಾವಿಯ ಬಳಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿರಾಲಿ ಬಂಗಾರಮಕ್ಕಿಯ ನಾಗರಾಜ ಮಂಜಪ್ಪ ದೇವಾಡಿಗ (42) ಎಂದು ಗುರುತಿಸಲಾಗಿದೆ. ಈತನಿಂದ 308 ಡಿಟೋನೇಟರ್‍ಸ, 317 ಕೆಜಿ ಅಮೋನಿಯಮ್ ನೈಟ್ರೇಟ್ ಹಾಗೂ 300 ಕೇಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿಗಳನ್ನಾಗಿ ಜಟ್ಟಯ್ಯ ಹಾಗೂ ಆನಂದ ಎಂದು ಹೆಸರಿಸಲಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ. ಬಂಧಿತ ನಾಗರಾಜನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಶಿಲೆಕಲ್ಲು ಕ್ವಾರಿಗಳಿಗೆ ಸ್ಪೋಟಕಗಳನ್ನು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದ್ದು, ಎಸೈ ನಂದೀಶ್ ಎಚ್.ಎಲ್ ನೇತೃತ್ವದಲ್ಲಿ ವಿಚಾರಣೆ ಮುಂದುವರೆದಿದೆ.