ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಸಕಲೇಶಪುರ: ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಸೇವೆಗೆ ಚಾಲನೆ

ಸಕಲೇಶಪುರ: ಮನೆಮನೆಗೆ ಹೋಗಿ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಸೇವೆಗೆ ಚಾಲನೆ

Thu, 18 Feb 2010 03:08:00  Office Staff   S.O. News Service

ಸಕಲೇಶಪುರ:-ನೈರ್ಮಲ್ಯದೆಡೆಗೆ ಪುರಸಭೆ ಅಂಗವಾಗಿ ಸೋಮವಾರ ಪಟ್ಟಣದ ೧೭ ನೇ ವಾರ್ಡಿನಲ್ಲಿ ಮನೆ ಮನೆಗೆ ಹೋಗಿ ಕಸ ಎತ್ತುವ ಆಟೋ ಟಿಪ್ಪರ್‌ನ್ನು ಸೇವೆಗೆ ಬಿಡುಗಡೆ ಗೊಳ್ಳಿಸಲಾಯಿತ್ತು, ಜಿಲ್ಲೆಯಲ್ಲೆ ಪ್ರಥಮ ಬಾರಿಗೆ ಪ್ರಯೋಗಿಕವಾಗಿ ಪಟ್ಟಣದ ಚಾಮುಂಡೇಶ್ವರಿ ಸ್ವ ಸಹಾಯ ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ಈ ಯೋಜನೆಯನ್ನು ಜಾರಿಗೋಳಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭ ಅಧ್ಯಕ್ಷ ಯಾದಗಾರ್ ಇಭ್ರಾಹಿಂ ಪಟ್ಟಣವವನ್ನು ಸುಂದರವಾಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಜನರು ಕಸವನ್ನು ಎಲ್ಲೇಡ ಹಾಕುವ ಬದಲು ಮನೆ ಬಾಗಿಲಿಗೆ ಬರುವ ಸ್ವ ಸಹಾಯ ಸಂಘದ ಮಹಿಳೆಯರಿಗೆ ನೀಡುವ ಮೂಲಕ ನಗರ ನೈರ್ಮಲ್ಯಕೆ ಪಣ ತೊಟ್ಟಿರುವ ಪುರಸಭೆಗೆ ಬೆಂಬಲ ನೀಡಬೇಕು ಎಂದರು.


Share: