ಭಟ್ಕಳ, ಡಿಸೆಂಬರ್ ೧೬: ರಾಜ್ಯದ ಆಡಳಿತ ಯಂತ್ರವು ಅವಸಾನದ ಅಂಚಿನಲ್ಲಿದ್ದು ಅದು ಪತನವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅಹಿಂದ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಮಲಾಕರ್ ಗೋಕರ್ಣ ಹೇಳಿದರು. ಅವರು ಇಂದು ಮದ್ಯಾಹ್ನ ಪತ್ರಿಕಾಗೋಷ್ಟಿಯೊಂದರಲ್ಲಿ ಈ ವಿಷಯ ತಿಳಿಸಿದ ಅವರು ಅಹಿಂದ ವತಿಯಿಂದ ಉತ್ತರಕನ್ನಡ ಜಿಲ್ಲೆಯ ವಿಧಾನಪರಿಷತ್ತು ಚುನಾವಣೆಯಲ್ಲಿ ಕಾಂಗೈನ ಎಸ್.ಎಲ್.ಘೋಟ್ನೆಕರ್ ಅವರಿಗೆ ಬೆಂಬಲಿಸುವುದಾಗಿ ತಿಳಿಸಿದ್ದು ಅವರು ಪತ್ರಿಕಾಗೋಷ್ಟಿಯುದ್ದಕ್ಕೂ ಬಿಜೆಪಿ ಸರಕಾರ ವಿರುದ್ದ ಹರಿಹಾಯ್ದರು.
ರಾಜ್ಯ ಬಿಜೆಪಿ ಸರಕಾರದಲ್ಲಿನ ಗುಂಪುಗಾರಿಕೆಯು ಜನಸಾಮಾನ್ಯರ ಮೇಲೆ ಪ್ರತಿಕೂಲ ಪರಿಣಾಮವನ್ನು ಮಾಡಿದೆ ಎಂದ ಅವರು ಇದರಿಂದಾಗಿ ರಾಜ್ಯವು ಅಭಿವೃದ್ಧಿ ಕಾಣದಾಗಿದೆ ಎಂದರು. ಉ.ಕ.ಜಿಲ್ಲೆಯಲ್ಲಿ ಇಬ್ಬರು ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು ಇದ್ದು ಇಲ್ಲದಂತಾಗಿದೆ.ಜಿಲ್ಲೆಯು ಇದುವರೆಗೆ ಯಾವುದೆ ಅಭಿವೃದ್ದಿ ಕಾಣಲಿಲ್ಲ ಇಲ್ಲಿನ ಸೇತುವೆಗಳು ಅವಸಾನ ಅಂಚಿನಲ್ಲಿವೆ. ಇದೆ ಪಕ್ಕಾದ ಗೋವಾ ರಾಜ್ಯಕ್ಕೆ ಹೋಲಿಸಿದರೆ ಅಲ್ಲಿ ನಿತ್ಯವೂ ಅಭಿವೃದ್ದಿಯಾಗುತ್ತಿದೆ ಎಂದ ಅವರು ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿಗಳು ಮರಣಕೂಪಗಳಾಗಿವೆ ಇದರ ದುರಸ್ಥಿ ಕಾರ್ಯ ಇದುವರೆಗೆ ಆಗುತ್ತಿಲ್ಲ ಎಂದರು.
ರಾಜ್ಯದ ಏಕೈಕ ಮಹಿಳಾ ಸಚಿವೆ ಆಕೆ ಭ್ರಷ್ಟೆಯಲ್ಲದಿದ್ದರೂ ಕೈಬಿಟ್ಟು ಸಿ.ಬಿ.ಐ ತನಿಖೆಗೊಳಪಟ್ಟ ಗಣಿ ರೆಡ್ಡಿಗಳ ರಾಜಿನಾಮೆಯನ್ನು ಕೇಳುತ್ತಿಲ್ಲ ಇದರಿಂದಾಗಿ ಈ ಸರ್ಕಾರ ಎಂತಹ ಭ್ರಷ್ಟವಾಗಿದೆ ಎಂಬುದನ್ನು ತೋರ್ಪಡಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಭಟ್ಕಳ ತಾಲುಕಾ ಅಹಿಂದ ಮುಖಂಡ ಮಖ್ಸೂದ್ ಆಹ್ಮದ್, ಜಯಂತನಾಯ್ಕ ಮತ್ತಿತರು ಉಪಸ್ಥಿತರಿದ್ದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ