ಭಟ್ಕಳ:, ಬಿಜೆಪಿ ಯ ಮುಖಂಡ ತಿಮ್ಮಪ್ಪ ನಾಯ್ಕ ಹತ್ಯೆಯಾಗಿ ಆರು ಕಳೆದರು ಇದುವರೆಗೂ ಹಂತಕ ಪತ್ತೆಯಾಗದಿರುವ ಕ್ರಮವನ್ನು ಪ್ರತಿಭಟಿಸಿ ನಗರದ ಶ್ರೀರಾಮ ಸೇನೆ ಘಟಕ ಮೆರವಣಿಗೆಯನ್ನು ನಡೆಸಿ ಸಹಾಯಕ ಕಮಿಷನರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಅರ್ಪಿಸಿತು.
ದಿವಂಗತ ಶಾಸಕ ಡಾ.ಚಿತ್ತರಂಜನ್ ಹಾಗೂ ತಿಮ್ಮಪ್ಪ ನಾಯ್ಕರ ಹಂತಕರನ್ನು ಹಿಡಿಯುವವರೆಗೂ ಶ್ರೀರಾಮ ಸೇನೆ ಸುಮ್ಮನೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರವದ ಮುತಾಲಿಕ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹಂತಹಂತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಮನವಿಯನ್ನು ಸಲ್ಲಿಸಿ ಮಾತನಾಡಿದ ಕೊಲ್ಲೂರು ರಾಮ ಸೇನೆ ಮುಖಂಡ ಸಾಬಣ್ಣ ಮಾತನಾಡಿ ಜಿಲ್ಲೆಯಾದ್ಯಂತ ಹಿಂದುಗಳ ದಮನವಾಗುತ್ತಿದೆ. ಭಟ್ಕಳ ಹಿಂದು ರಾಷ್ಟ್ರವಾದಾಗ ಮಾತ್ರ ಕರ್ನಾಟಕವು ಹಿಂದು ರಾಷ್ಟ್ರವಾಗಲು ಸಾಧ್ಯ ಅದಕ್ಕಾಗಿ ಶ್ರೀರಾಮಸೇನೆಯು ಯುವಕರಲ್ಲಿ ಧರ್ಮಜಾಗೃತಿಯನ್ನು ಮೂಡಿಸುವ ಕಾರ್ಯಮಾಡುತ್ತಿದೆ ಎಂದರು.
ಸಹಾಯಕ ಕಮಿಷನರ್ ರ ಅನುಪಸ್ಥಿತಿಯಲ್ಲಿ ತಹಸಿಲ್ದಾರ್ ಎಂ.ಬಿ.ನಾಯ್ಕ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಮಸೇನೆಯ ಗಿರಿಶ್ ಶಟ್ಟಿ, ಜಯಂತ್ ನಾಯ್ಕ, ಶಂಕರ್ ನಾಯ್ಕ, ಬಿಜೆಪಿಯ ಎಂ.ಎಂ ನಾಯ್ಕ, ಗಣೇಶ ನಾಯ್ಕ, ಈಶ್ವರ ದೊಡ್ಮನೆ ಮುಂತಾದವರು ಹಾಜರಿದ್ದರು.