ಭಟ್ಕಳ, ಡಿಸೆಂಬರ್ 28: ಭಟ್ಕಳ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದ್ದು ಮಾಜಿ ಸಚಿವಾ ಶಿವಾನಂದ ನಾಯ್ಕ ಹಾಗೂ ಹಾಲಿ ಸಂಸದ ಅನಂತ ಕುಮಾರ್ ಹೆಗಡೆಯ ಬಣದಲ್ಲಿನ ವಾಕ್ಸಮರ ತಾರಕಕ್ಕೇರಿದೆ. ಇಂದು ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಬೂತ್ ಕಮಿಟಿ ರಚನೆ ಕುರಿತಂತೆ ಎರಡೂ ಬಣದಲ್ಲಿನ ಮುಖಂಡರ ಮದ್ಯೆ ಹ್ಯೊ ಕೈ ಹಂತಕ್ಕೆ ತಲುಪಿದ್ದು ಇನ್ನೇನು ಹೊಡೆದಾಡಿಯೆ ಬಿಟ್ಟರು ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿತ್ತು ಎನ್ನಲಾಗಿದೆ.
ಬೂತ್ ಕಮಿಟಿಯ ರಚನೆಗೆ ಸಂಬಂಧಿಸಿದಂತೆ ಒಂದು ಬಣವು ಅತೃಪ್ತಗೊಂಡಿದ್ದು ಈ ಕುರಿತು ಅನಂತ ಬಣದ ಗಣೇಶ ನಾಯ್ಕ ಹಾಗೂ ಜಿ.ಪಂ ಸದಸ್ಯರಾದ ಎಮ.ಎಮ. ನಾಯ್ಕ, ಸುಭದ್ರ ದೇವಾಡಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿದ್ದು ಮಾಜಿ ಸಚಿವಾ ಶಿವಾನಂದ ನಾಯ್ಕರ ವಿರುದ್ದ ಕಿಡಿ ಕಾರಿದ್ದಾರೆ. ಗಣೇಶ ನಾಯ್ಕ ಮಾತನಾಡಿ ಮಾಜಿಸಚಿವರು ಪಕ್ಷ ವಿರೋಧಿ ಕೆಲಸವನ್ನು ಮಾಡುತ್ತಿದ್ದಾರೆ. ಅವರು ಜೀವನದಲ್ಲಿ ಇನ್ನೂ ಮುಂದೆ ಶಾಸಕನಾಗಿ ಆಯ್ಕೆಯಾಗಲಾರ ಶಾಸಕನಲ್ಲ ಜಿ.ಪಂ ಸ್ಥಾವನ್ನು ಪಡೆಯುವ ಆರ್ಹತೆಯಿಲ್ಲ ಎಂದರು. ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ್ತೋರ್ವ ಅಭ್ಯರ್ಥಿಯನ್ನು ನಿಲ್ಲಿಸಿ ಷಟ್ಯಂತ್ರವನ್ನು ರೂಪಿಸಿದ್ದಾರೆ. ಹಣವನ್ನು ಹಂಚುವುದರ ಮೂಲಕ ಅವರು ಬಿಜೆಪಿ ಅಧಿಕೃತ ಅಭ್ಯರ್ಥಿಯನ್ನು ಸೋಲಿಸುವುಲ್ಲಿ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಾದೇವ ನಾಯ್ಕ ,ಈರಪ್ಪ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ