ಬೆಂಗರೆಯಲ್ಲಿ ಸಲಫಿ ಸಮಾವೇಶ
ಮಂಗಳೂರು, ಮೇ 3: ಪವಿತ್ರ ಕುರ್‌ಆನ್ ಮತ್ತು ಪ್ರವಾದಿ(ಸ)ರ ಸುನ್ನತ್‌ಗಳು ಸಾರುವ ತತ್ವಾದರ್ಶಗಳನ್ನು ಯಥಾವತ್ತಾಗಿ ಜನರ ಮುಂದೆ ಅನಾವರಣಗೊಳಿಸುವ ಮೂಲಕ ಅಂಧ ವಿಶ್ವಾಸ, ಅನಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ನಾಡಿನೆಲ್ಲೆಡೆ ಜನಜಾಗತಿ ಆಂದೋಲನ ಹಮ್ಮಿಕೊಳ್ಳುತ್ತಿದೆ ಎಂದು ಯುವ ವಾಗ್ಮಿ ವೌಲವಿ ಹಾಫಿಝ್ ಕೆ.ಟಿ.ಸಿರಾಜ್ ಹೇಳಿದ್ದಾರೆ.
ಎಸ್‌ಕೆಎಸ್‌ಎಂ ಬೆಂಗರೆ ಘಟಕದ ವತಿಯಿಂದ ಕಡವಿನ ಬಳಿಯಲ್ಲಿ ಇತ್ತೀಚೆಗೆ ನಡೆದ ಸಲಫಿ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು. ವೌಲವಿ ಮುಹಮ್ಮದ್ ಇಜಾಝ್ ಸ್ವಲಾಹಿ ಪ್ರವಾದಿ ಜೀವನ ಸಂದೇಶದ ಕುರಿತು ಮಾತನಾಡಿದರು. ಕೇಂದ್ರ ಸಮಿತಿಯ ಅಧ್ಯಕ್ಷ ಅಹ್ಮದ್ ಅನ್ಸಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಬಶೀರ್ ಅಹ್ಮದ್ ಶಾಲಿಮಾರ್ ಮತ್ತು ಮಾಜಿ ಕಾರ್ಪೊರೇಟರ್ ಫಾರೂಕ್ ಬೆಂಗರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯದರ್ಶಿ ಮುಹಮ್ಮದ್ ಗುಲಾಂ, ರಿಯಾಝ್ ಅಹ್ಮದ್ ಉಪಸ್ಥಿತರಿದ್ದರು.ಸಲಫಿ ಮೂವ್‌ಮೆಂಟ್‌ನ ಕೇಂದ್ರೀಯ ಮಂಡಳಿ ಕಾರ್ಯದರ್ಶಿ ಇಸ್ಮಾಯೀಲ್ ಶಾಫಿ ಸ್ವಾಗತಿಸಿದರು. ಘಟಕದ ಅಧ್ಯಕ್ಷ ಹಂಝ ಬೆಂಗರೆ ವಂದಿಸಿದರು.