ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ರಾಜ್ಯವನ್ನು ಕೋಮುದಳ್ಳುರಿಗೆ ನೂಕಿದ ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ

ಭಟ್ಕಳ: ರಾಜ್ಯವನ್ನು ಕೋಮುದಳ್ಳುರಿಗೆ ನೂಕಿದ ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ

Wed, 16 Dec 2009 03:06:00  Office Staff   S.O. News Service
ಭಟ್ಕಳ, ಡಿಸೆಂಬರ್ 15:ರಾಜ್ಯವನ್ನು ಕೋಮುದಳ್ಳೂರಿಗೆ ನೂಕಿದ ಯಡಿಯೂರಪ್ಪನವರು ಕರ್ನಾಟಕದ ರಾಜ್ಯದ ಇತಿಹಾಸದಲ್ಲೆ ಅತ್ಯಂತ ದುರ್ಬಲ ಮುಖ್ಯಮಂತ್ರಿಯಾಗಿದ್ದು ಇವರ ಅಧಿಕಾರ ಅವಧಿಯ ಒಂದುವರೆ ವರ್ಷವು ರಾಜ್ಯವನ್ನು ಆರ್ಥಿಕ ದಿವಾಳಿಯಡೆಗೆ ಕೊಂಡೊಯ್ಯುವಂತಾಗಿದೆ ಎಂದು ರಾಜ್ಯ ಕಾಂಗೈ ಅಧ್ಯಕ್ಷ ಆರ್‍ವಿ ದೇಶಪಾಂಡೆ ಆರೋಪಿಸಿದರು. ಅವರು ಇಂದು ಇಲ್ಲಿನ ರಾಬಿತಾ ಸಂಸ್ಥೆಯ ಹಸನ್ ಕಾಝಿಯ ಸಭಾಂಗಣದಲ್ಲಿ ಉ.ಕ.ಜಿಲ್ಲಾ ವಿಧಾನಪರಿಷತ್ ಅಭ್ಯರ್ಥಿ ಎಸ್.ಎಲ್.ಘೋಟ್ನೆಕರ್ ಪರ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿ ಜನರನ್ನು ಆತಂಕದಲ್ಲಿ ದೂಡಿದ ಕೀರ್ತಿ ಯಡಿಯೂರಪ್ಪ ಸರಕಾರಕ್ಕೆ ಸಲ್ಲಬೇಕು ಎಂದ ಅವರು ರಾಜ್ಯದಲ್ಲಿ ಹಣಕಾಸು ವ್ಯವಸ್ಥೆಯು ತೀರಾ ಹದಗೆಟ್ಟುಹೋಗಿದ್ದು ರಿಸರ್ವಬ್ಯಾಂಕಿನಿಂದ ಸಾಲವನ್ನು ಪಡೆದು ದಿನ ದೂಡುತ್ತಿದೆ ಸರಕಾರಿ ನೌಕರರಿಗೆ ವೇನತ ನೀಡಲು ಸರಕಾರದಲ್ಲಿ ಹಣವಿಲ್ಲ ಇಂತಹ ಅಧೋಗತಿಯಲ್ಲಿ ಬಿಜೆಪಿ ಸರಕಾರವಿದ್ದು ಅದು ನಮ್ಮ ರಾಜ್ಯದ ಅಭಿವೃದ್ಧಿಯನ್ನು ಹೇಗೆ ಸಾಧಿಸಬಲ್ಲದು ಎಂದು ಸವಾಲೆಸೆದರು. ಅತಿವೃಷ್ಟಿಯಿಂದಾಗಿ ಉತ್ತರಕರ್ನಾಟಕ ತತ್ತರಿಸಿ ಹೋದರೂ ಇವರು ಚಿಂತನ ಬೈಠಕ್ ನಲ್ಲಿ ಕುಳಿತು ಚಿಂತನೆಯನ್ನು ಮಾಡುತ್ತಿದ್ದರು ಎಂದು ಟಿಕಿಸಿದ ಅವರು ಈ ಸಮಯದಲ್ಲಿ ಸರಕಾರ ನಡೆದುಕೊಂಡ ರೀತಿ ನಾಚಿಕೆಗೇಡಿನದ್ದು ಎಂದರು. ನ್ಯಾಯದ ಬೇಡಿಕೆಗಾಗಿ ಧರಣಿ ನಿರತ ರೈತರ ಮೇಲೆ ಲಾಠಿ ಚಾರ್ಜ ನಡೆಸಲಾಗಿದೆ. ರೈತರ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರೇ ರೈತ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಶಾಸಕ ಜೆ.ಡಿ.ನಾಯ್ಕ, ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಸದಸ್ಯರಾದ ದಾಮೋದರ ಗರ್ಡೀಕರ, ಭೀಮಣ್ಣ ನಾಯ್ಕ, ಮಂಕಾಳು ವೈದ್ಯ, ಮುಖಂಡರಾದ ಸಾಯಿ ಗಾಂವಕರ್, ಷಣ್ಮುಗ ಗೌಡ, ಎಮ್.ಎಸ್.ನಾಯ್ಕ, ರಾಮಾ ಮೊಗೇರ, ಎಲ್.ಎಸ್.ನಾಯ್ಕ, ವನಿತಾ ನಾಯ್ಕ, ಭಾಗ್ವತ, ಕೆಪಿಸಿಸಿ ಸದಸ್ಯ ಗಜಾನನ ಆಚಾರ್ಯ, ಭಟ್ಕಳ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶೀಮ್‌ಜಿ, ತಂಝೀಮ್ ಅಧ್ಯಕ್ಷ ಡಾ.ಬದ್ರುಲ್‌ಹಸನ್‌ಮು‌ಅಲ್ಲಿಮ್ ಎಸ್.ಎಮ್.ಸೈಯ್ಯದ್‌ಅಬ್ದುಲ್‌ಅಜೀಮ್‌ಅಂಬಾರಿ, ಜ್ಯಾತ್ಯಾತೀತ ಜನತಾದಳದ ತಾಲೂಕಾಧ್ಯಕ್ಷ ಎಮ್.ಡಿ.ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಾಯ ನಾಯ್ಕ ಸ್ವಾಗತಿಸಿದರು. ರಾಜು ಹೆಬ್ಬಾರ ವಂದಿಸಿದರು. ಚಿತ್ರ, ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: