ಬೆಂಗಳೂರು, ನ. ೨೦: ನಗರದಲ್ಲಿ ದಿಢೀರ್ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿ ಆದಾಯ ತೆರಿಗೆ ಪಾವತಿಸದ ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಉದ್ಯಮಿಗಳು ಮತ್ತು ರಾಜಕಾರಣಿಗಳ ಅಕ್ರಮ ಆಸ್ತಿ-ಪಾಸ್ತಿ ಜಪ್ತಿ ಮಾಡಿದ್ದಾರೆ.

ನಗರದ ಶಿವಾನಂದ ಸ್ಟೋರ‍್ಸ್ ಸಮೀಪದಲ್ಲಿನ ಪ್ರತಿಷ್ಠಿತ ಗೋಲ್ಡ್‌ಫಿಂಚ್ ಹೊಟೇಲ್ ಮಾಲಕ ಪ್ರಕಾಶ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಹಾಗೂ ಬ್ಯಾಟರಾಯನಪುರ ನಗರಸಭೆ ಮಾಜಿ ಅಧ್ಯಕ್ಷ ಚಕ್ರಪಾಣಿ, ನಂದಿನಿ ಗ್ರೂಫ್ ಆಫ್ ಹೊಟೇಲ್‌ನ ಮಾಲಕ ಆನಂದ್ ರೆಡ್ಡಿ, ಪ್ರಥಮ್ ಮೋಟಾರ‍್ಸ್‌ಗೆ ಕಟ್ಟಡವೊಂದನ್ನು ಬಾಡಿಗೆ ನೀಡಿದ್ದ ಮಕ್ಮಲ್ ಪಾಷ ಸೇರಿದಂತೆ ವಿವಿಧ ವ್ಯಕ್ತಿಗಳ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ.

ಇಲ್ಲಿನ ಕೋಡಿಗೇಹಳ್ಳಿಯಲ್ಲಿನ ಕಾಂಗ್ರೆಸ್ ಮುಖಂಡ ಚಕ್ರಪಾಣಿ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳು ಆಸ್ತಿಯ ದಾಖಲೆ ಪತ್ರಗಳು, ಬ್ಯಾಂಕ್ ಖಾತೆಯ ವಿವರಗಳು, ನಗದು, ಚಿನ್ನದ ಆಭರಣ ಮತ್ತಿತರ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಚಕ್ರಪಾಣಿ ಅವರು ಬಹಳ ದಿನಗಳಿಂದ ಆದಾಯ ತೆರಿಗೆ ಪಾವತಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಮತ್ತೊಂದು ಕಡೆ ನಗರದ ನಂದಿನಿ ಗ್ರೂಫ್ ಆಫ್ ಹೊಟೇಲ್ಸ್‌ನ ಮಾಲಕ ಆನಂದ್ ರೆಡ್ಡಿ ಅವರ ಇಂದಿರಾನಗರದಲ್ಲಿನ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ಆಸ್ತಿ-ಪಾಸ್ತಿಯ ಲೆಕ್ಕಪತ್ರಗಳು, ಸಂಗ್ರಹಿಸಿರು ಕಪ್ಪು ಹಣದ ಕುರಿತು ಶೋಧ ಕೈಗೊಂಡಿದ್ದಾರೆ.

ನಗರದ ಶಿವಾನಂದ ಸ್ಟೋರ‍್ಸ್ ಬಳಿ ಇರುವ ಗೋಲ್ಡ್ ಫಿಂಚ್ ಹೊಟೇಲ್‌ನ ಮಾಲಕ ಪ್ರಕಾಶ್ ಶೆಟ್ಟಿ ಅವರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಮನೆ ಹಾಗೂ ಪ್ರಥಮ್ ಮೋಟಾರ‍್ಸ್‌ಗೆ ಕಟ್ಟಡವನ್ನು ಬಾಡಿಗೆಗೆ ನೀಡಿದ್ದ ಮಕ್ಮಲ್‌ಪಾಷ ಅವರ ಜಯಮಹಲ್‌ನಲ್ಲಿರುವ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಕೋಟ್ಯಂತರ ರೂಪಾಯಿ ಮೊತ್ತದ ಅಕ್ರಮ ಆಸ್ತಿ-ಪಾಸ್ತಿ, ಹಣವನ್ನು ಪತ್ತೆಮಾಡಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ತೆರಿಗೆ ಪಾವತಿಸಿದ ಉದ್ಯಮಿಗಳ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಮಾಡಿರುವ ಹಿನ್ನೆಲೆಯಲ್ಲಿ ನಗರದ ರಿಯಲ್ ಎಸ್ಟೇಟ್ ಏಜೆಂಟ್‌ಗಳು ಮತ್ತು ಉದ್ಯಮಿಗಳಲ್ಲಿ ಆತಂಕ ಸೃಷ್ಟಿಸಿದೆ. ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ


ಮತ್ತೊಂದು ಕಡೆ ನಗರದ ನಂದಿನಿ ಗ್ರೂಫ್ ಆಫ್ ಹೊಟೇಲ್ಸ್‌ನ ಮಾಲಕ ಆನಂದ್ ರೆಡ್ಡಿ ಅವರ ಇಂದಿರಾನಗರದಲ್ಲಿನ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಅಕ್ರಮ ಆಸ್ತಿ-ಪಾಸ್ತಿಯ ಲೆಕ್ಕಪತ್ರಗಳು, ಸಂಗ್ರಹಿಸಿರು ಕಪ್ಪು ಹಣದ ಕುರಿತು ಶೋಧ ಕೈಗೊಂಡಿದ್ದಾರೆ.

