ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕಾರವಾರ: ಕುಂದಾಪುರ-ಗೋವಾ ನಡುವಣ ರಾ. ಹೆದ್ದಾರಿಗೆ ಕೇಂದ್ರದ ಒಪ್ಪಿಗೆ ನಿರೀಕ್ಷೆ

ಕಾರವಾರ: ಕುಂದಾಪುರ-ಗೋವಾ ನಡುವಣ ರಾ. ಹೆದ್ದಾರಿಗೆ ಕೇಂದ್ರದ ಒಪ್ಪಿಗೆ ನಿರೀಕ್ಷೆ

Wed, 20 Jan 2010 18:51:00  Office Staff   S.O. News Service

ಕಾರವಾರ, ಜನವರಿ 20: ಅತಿ ಹೆಚ್ಚಾಗಿ ಹಾಳಾಗಿರುವ ಹಾಗೂ ಅಪಘಾತಪೀಡಿತ ರಸ್ತೆಯಾದ ರಾ.ಹೆ. ೧೭ ನ್ನು ಚತುಷ್ಪಥವನ್ನಾಗಿಸುವ ಕಾರ್ಯ ಸರ್ಕಾರದ ಅನುಮೋದನೆಯ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ National Highway Authority of India (NHAI) ಸಂಸ್ಥೆ ಕುಂದಾಪುರದಿಂದ ಗೋವಾ ಗಡಿಯ ಬಳಿಯ ಮಾಜಳಿ ಎಂಬ ಗ್ರಾಮದವರೆಗಿನ ಹೆದ್ದಾರಿಯನ್ನು ಚತುಷ್ಪಥವನ್ನಾಗಿಸುವ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದೆ ಎಂದು ಸಂಸ್ಥೆಯ ನಿರ್ದೇಶಕರಾದ ಗಾವಸಾನಿ ತಿಳಿಸಿದ್ದಾರೆ.

ಈ ಕಾರ್ಯಕ್ಕಾಗಿ ಬಿ.ಒ.ಟಿ.(BOT (Build, Operate and Transfer) ವ್ಯವಸ್ಥೆಯ ಮೂಲಕ ಮಂಗಳೂರಿನಿಂದ ಟೆಂಡರುಗಳನ್ನು ಅಹ್ವಾನಿಸಲಾಗಿದೆ. ಚತುಷ್ಪಥವಾದ ಬಳಿಕ ಹೆದ್ದಾರಿ ಪ್ರತಿ ಬದಿಯಲ್ಲಿಯೂ ಅರವತ್ತು ಅಡಿ ಅಗಲವಾಗಿರುವುದು ಎಂದು ಅವರು ತಿಳಿಸಿದ್ದಾರೆ.

ಕುಂದಾಪುರ -ಸುರತ್ಕಲ್ ನಡುವಣ ಎಪ್ಪತ್ತೈದು ಕಿ.ಮೀ ಹಾಗೂ ನಂತೂರು ಮತ್ತು ತಲಪಾಡಿ (ಕೇರಳ) ನಡುವಣ ಹದಿನೈದು ಕಿ.ಮೀ ದೂರದ ರಸ್ತೆ ಅಗಲಗೊಳಿಸುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ. 


Share: