ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ಅಧಿಕಾರ ಉಳಿಸಿಕೊಳ್ಳುವುದೇ ಸರ್ಕಾರದ ಒಂದಂಶದ ಕಾರ್ಯಕ್ರಮ - ಕುಮಾರಸ್ವಾಮಿ ಲೇವಡಿ

ಸಕಲೇಶಪುರ: ಅಧಿಕಾರ ಉಳಿಸಿಕೊಳ್ಳುವುದೇ ಸರ್ಕಾರದ ಒಂದಂಶದ ಕಾರ್ಯಕ್ರಮ - ಕುಮಾರಸ್ವಾಮಿ ಲೇವಡಿ

Wed, 06 Jan 2010 03:00:00  Office Staff   S.O. News Service
ಸಕಲೇಶಪುರ, ಜನವರಿ 6:ಸರ್ಕಾರಕ್ಕೆ ಅಧಿಕಾರ ಉಳಿಸಿ ಕೊಳ್ಳುವುದೆ ಒಂದಾಂಶದ ಕಾರ್ಯಕ್ರಮವಾಗಿದ್ದು ಜನರ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ ಎಂದು ಶಾಸಕ ಹೆಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ. ಅವರು ಸೊಮವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ,  ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಮತ್ತು ದಕ್ಷಿಣ ಕರ್ನಾಟಕದಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿ ಸಂಭವಿಸಿ ರೈತರು ಸಂಕಷ್ಟದಲ್ಲಿ ಇದ್ದಾರೆ ಈ ಬಗ್ಗೆ ಸರ್ಕಾರ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ಅನಿರ್ದಿಷ್ಟಕಾಲ ಮುಂದೂಡಿರುವುದು ದುರದೃಷ್ಟಕರ ಮತ್ತು ಖಂಡನೀಯ ಎಂದರು. 
 
ಒಂದು ವರ್ಷದ ಅದಿವೇಶನ ಕನಿಷ್ಟ ೬೦ ದಿನಗಳು ಹಾಗೂ ಗರೀಷ್ಟ ೧೦೦ ದಿನ ನಡೆಯ ಬೇಕೆಂಬ ನಿಯಮ ವಿದ್ದರು ಸರ್ಕಾರ ಈ ಬಾರಿ ಕೇವಲ ೩೫ ದಿನ ಅಧೀವೇಶನ ನಡೆಸುವ ಮೂಲಕ ಸರ್ಕಾರಕ್ಕೆ ಅದೀವೇಶನ ನಡೆಸುವ ಮೂಲಕ ಸಾಮನ್ಯ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಸಾಮರ್ಥ್ಯವೆ ಇಲ್ಲ ಎಂಬುದು ದೃಡ ಪಟ್ಟಿದೆ. ಈ ಅದಿವೇಶನದಲ್ಲಿ ಈ ಕ್ಷೇತ್ರಕ್ಕೆ ಸಂಭದಿಸಿದಂತೆ ಹಲವು ವಿಷಯಗಳನ್ನು ಚರ್ಚೆಸ ಬೇಕಾಗಿತ್ತು ಮುಖ್ಯವಾಗಿ ಗುಂಡ್ಯಯೋಜನೆ, ಮರಳು ಸಾಗಣೆ, ವಿದ್ಯುತ್ ಸಮಸ್ಯೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನರಿಗೆ ನೀರಾವರಿ ಕೊಳವೆ ಬಾವಿ ಕೋರೆಯುವಲ್ಲಿ ವಿಫಲವಾಗಿರುವ ಬಗ್ಗೆ, ಕಾಪಿ, ಏಲಕ್ಕಿ ಬೆಳೆಗಾರರು ತಮ್ಮ ಹಿಡುವಳಿ ಜಮೀನಿನಲ್ಲಿ ( ಬೀಟೆ, ತೇಗ,ನಂದಿ) ಮರಗಳನ್ನು ಕಡಿದು ಸಾಗಿಸಲು ನೀಷೇದಿಸಿರುವ ಬಗ್ಗೆ, ಅರ್ದಕ್ಕೆ ನಿಂತಿರುವ ಸೇತುವೆ ಕಾಮಗಾರಿಗಳ ಬಗ್ಗೆ, ಗ್ರಾಮೀಣ ಬಸ್‌ಗಳ ದುರ‌ಅವಸ್ಥ ಬಗ್ಗೆ, ಗೂರೂರು ಗ್ರಾಮಕ್ಕೆ ಶುಚಿ ನೀರು ಪೂರೈಕೆ ಬಗ್ಗೆ, ಕಟ್ಟಾಯ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸುವ ಬಗ್ಗೆ, ಆಲೂರು ತಾಲ್ಲೂಕಿನಲ್ಲಿ ೧೭ ಶೀತ ಪೀಡಿತ ಹಳ್ಳಿಗಳನ್ನು ಸ್ಥಳಾಂತರಿಸುವ ಬಗ್ಗೆ, ಹೆತ್ತೂರು ಗ್ರಾಮಕ್ಕೆ ವಿದ್ಯುತ್ ವಿತರಣ ಸ್ಥಾಪಿಸುವ ಬಗ್ಗೆ  ಸದನದಲ್ಲಿ ಚರ್ಚಿಸಲು ತಿರ್ಮಾನಿಸಲಾಗಿತ್ತು ಆದರೆ ಈ ಸಮಸ್ಯಗಳಲ್ಲಿ ಕೇಲವನ್ನು ಸದನದ ಗಮನಕ್ಕೆ ತರಲಾಗಿದೆ ಆದರೆ ಆ ವೇಳೆಗೆ ಸದನವನ್ನೇ ಮುಂದೂಡವು ಮೂಲಕ ನನ್ನಂತಹ ಹಲವಾರು ಶಾಸಕರಿಗೆ ಬಾರಿ ನಿರಾಸೆ ಉಂಟುಮಾಡಿದರು ಎಂದರು.
 
ಕಳೆದ ಕೆಲವು ದಿನಗಳಲ್ಲಿ ತಾಲ್ಲೂಕಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಇಲ್ಲಿಯ ಸಾಂಪ್ರದಾಯಕ ಬೆಳೆಗಳಿಗೆ ನಷ್ಟವಾಗಿರುವ ಬಗ್ಗೆ ಮುಖ್ಯಮಂತ್ರಿ ಗಳಿಗೆ ಹಾಗೂ ಕೃಷಿ ಮತ್ತು ಕಂದಾಯ ಸಚಿವರಿಗೂ ಪತ್ರ ಬರೆದು ಪರಿಹಾರಕ್ಕೆ ಒತ್ತಾಯಿಸಲಾಗಿದೆ. ಅಧಿಕಾರಿಗಳು ಈ ಕೊಡಲೇ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬೇಟಿ ನೀಡಿ ವರಧಿತಯಾರಿಸಿ ಸರ್ಕಾರಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜಿ.ಪಂ ಸದಸ್ಯ ಕುಮಾರಸ್ವಾಮಿ. ತಾ.ಪಂ ಸದಸ್ಯರಾದ ನಾಗರಾಜ್, ಸಿದ್ದಯ್ಯ.  ಸ.ಬಾ ಸೋಮಶೇಖರ್. ಸ.ಬಾ ಬಾಸ್ಕರ್ ಉಪಸ್ಥಿತರಿದ್ದರು.

Share: