ಭಟ್ಕಳ, ಮಾರ್ಚ್ 2: ಶೀಘ್ರವೇ ಭಟ್ಕಳದಿಂದ ಹೊನ್ನಾವರ ತಾಲ್ಲೂಕಿನ ಮನ್ಕಿಯವರೆಗಿನ ಜನತೆ ವಿಶೇಷ ಕನ್ನಡ ವಾಹಿನಿಯನ್ನು ತಮ್ಮ ಟೀವಿಯಲ್ಲಿ ಪಡೆಯಲಿದ್ದಾರೆ. 'ಭಾವನಾ' ಎಂಬ ಎಂಬ ಹೆಸರಿನ ಈ ಟೀವಿ ವಾಹಿನಿ ಮನರಂಜನಾ, ವಾರ್ತಾ ಹಾಗೂ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ ಎಂದು ಭಾವನಾ ಟೀವಿ ವಾಹಿನಿಯನ್ನು ಹೊರತರುತ್ತಿರುವ ಸಂಸ್ಥೆಯಾದ ಸಾಕ್ಷಿ ಎಂಟರ್ ಪ್ರೈಸಸ್ ಮಾಲಿಕರಾದ ಶಂಕರ್ ಭವಾನಿ ತಿಳಿಸಿದ್ದಾರೆ.
ಕೇವಲ ಮನರಂಜನೆಗೆ ಮಾತ್ರವಲ್ಲದೇ ಕೃಷಿ, ಆರೋಗ್ಯ, ಕಾನೂನು, ಅಡುಗೆ, ಸಾಂಸ್ಕೃತಿಕ, ಶೈಕ್ಷಣಿಕ ವಿಷಯಗಳ ಕುರಿತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುವುದು. ಜಿಲ್ಲೆಗೆ ಆಗಮಿಸುವ ಅಧಿಕಾರಿಗಳ ಬಗ್ಗೆ ಜನತೆಗೆ ವಿವರ ನೀಡುವ ವಿಶೇಷ ಕಾರ್ಯಕ್ರಮವನ್ನು ಪ್ರಸಾರಗೊಳಿಸುವ ವಿಚಾರವೂ ಇದೆ ಎಂದು ಅವರು ತಿಳಿಸಿದರು.
ಅತಿಶೀಘ್ರದಲ್ಲಿ ಟೀವಿ ವಾಹಿನಿ ಪ್ರಾರಂಭಗೊಳ್ಳಲಿದೆ ಎಂದು ಅವರು ಪತ್ರಿಕಾ ಪ್ರತಿನಿಧಿಗಳಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ವಾಹಕ ನಿರ್ದೇಶಕರಾದ ಶ್ರೀ ಶಂಕರ್ ನಾಯಕ್ ಸಹಾ ಉಪಸ್ಥಿತರಿದ್ದರು.