ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಚಿಕ್ಕಬಳ್ಳಾಪುರ: ಸಾಲಭಾದೆ ಒಂದೇ ಕುಟುಂಬದ ನಾಲ್ಕು ಮಂದಿ ವಿಷ ಸೇವನೆ

ಚಿಕ್ಕಬಳ್ಳಾಪುರ: ಸಾಲಭಾದೆ ಒಂದೇ ಕುಟುಂಬದ ನಾಲ್ಕು ಮಂದಿ ವಿಷ ಸೇವನೆ

Thu, 19 Nov 2009 03:11:00  Office Staff   S.O. News Service
ಚಿಕ್ಕಬಳ್ಳಾಪುರ ನವಂಬರ್ 18 : ನಗರದ ಗರ್‍ಲ್ಸ್ ಸ್ಕೂಲ್ ರಸ್ತೆಯ ಅರಳೆ ಪೇಟೆ ಬಳಿ ಮನೆಯೊಂದರಲ್ಲಿ ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ನಾಲ್ಕು ಮಂದಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಒಬ್ಬ ಮೃತ ಪಟ್ಟು  ಇನ್ನುಳಿದ ಮೂರು ಮಂದಿಯನ್ನು ಬೆಂಗಳೂರಿನ ವಿವಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ನಗರದ ಸರ್.ಎಂ.ವಿ.ರಸ್ತೆಯಲ್ಲಿ ಅಂಬಿಕಾ ಮೆಡಿಕಲ್ಸ್ ಎಂಬ ಔಷಧಿ ಅಂಗಡಿಯನ್ನು ನಡೆಸುತ್ತಿದ್ದ ಮಲ್ಲಿಖಾರ್ಜುನ್(೪೫) ಹಾಗು ಆತನ ಪತ್ನಿ ಪದ್ಮಾವತಿ(೩೮), ಮಗ ಗೋಕುಲ್(೨೫) ಹಾಗು ಮಗಳು ಅಂಬಿಕಾ(೨೨)  ಎಂಬುವವರು ಇಂದು ಸಂಜೆ ಅರಳೇ ಪೇಟೆ ಬಳಿಯಿರುವ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದು, ಮಲ್ಲಿಖಾರ್ಜುನರ ಪತ್ನಿ ಪದ್ಮಾವತಿ ಕೊನೆ ಹಂತದಲ್ಲಿ ತಮ್ಮ ಸಂಬಂಧಿಯೊಬ್ಬರಿಗೆ ದೂರವಾಣಿ ಮಾಡಿ ತಾವು ವಿಷ ಸೇವಿಸಿರುವ ಬಗ್ಗೆ ವಿಷಯ ತಿಳಿಸಿದಳೆಂದು ತಿಳಿದು ಬಂದಿದೆ.

ತಕ್ಷಣವೇ ಕಾರ್ಯೋನ್ಮುಕರಾದ ಅವರ ಸಂಭಂದಿ ಬಿಜೆಪಿ ಮುಖಂಡ ಲಕ್ಷೀನಾರಾಯಣ ಗುಪ್ತರಿಗೆ ವಿಷಯವನ್ನು ತಿಳಿದ್ದಾರೆ, ತಕ್ಷಣವೇ ೧೦೮ ಆಂಬುಲೆನ್ಸಿಗೆ ಕರೆಮಾಡಿ ವಿಷಯವನ್ನು ತಿಳಿಸಿ, ತಮ್ಮ ಸ್ಣೇಹಿತ ಬೈರೇಗೌಡರೊಂದಿಗೆ ಮನೆಯ ಬಳಿಗೆ ತೆರಳಿದ ಅವರು ಮನೆ ಬಾಗಿಲನ್ನು ಮುರಿದು ಒಳಗೆ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದವರನ್ನು ಆಂಬುಲೆನ್ಸಿಗೇರಿಸಿದರಾದರೂ ಅಷ್ಟೊತ್ತಿಗಾಗಲೇ ಮಲ್ಲಿಖಾರ್ಜುನರ ಮಗ ಗೋಕುಲ್ (೨೫) ಸಾವನ್ನಪ್ಪಿದ್ದನೆಂದು ತಿಳಿದು ಬಂದಿದೆ.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಿಖಾರ್ಜುನ್ ಹಾಗು ಆತನ ಮಗಳು ಅಂಬಿಕಾಳನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಹಾಗು ಪತ್ನಿ ಪದ್ಮಾವತಿಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗಿದೆ.

ಸ್ಥಳಕ್ಕೆ ನಗರ ಠಾಣಾ ಎಸ್.ಐ. ಶಿವಪ್ರಸಾದ್, ವೃತ್ತ ನಿರೀಕ್ಷಕ ಶಿವಕುಮಾರ್ ತೆರಳಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.


Share: