ಭಟ್ಕಳ, ಜನವರಿ 22: ಮುಂಡಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಜನರಹಿತ ಪ್ರದೇಶದಲ್ಲಿ ಹಾಕಲಾಗಿದ್ದ ಕೃಸ್ತರ ಆರಾಧನೆ ಮಾಡುವ ಶಿಲುಭೆಯನ್ನು ಯಾರೋ ಕಿಡಿಗೇಡಿಗಳು ದ್ವಂಸಗೊಳಿಸಲು ಪ್ರಯತ್ನಿಸಿದ್ದು ಇಲ್ಲಿನ ಜನರನ್ನು ಆತಂಕ್ಕೀಡು ಮಾಡಿದೆ.ಈ ಘಟನೆಯು ಶುಕ್ರವಾರ ರಾತ್ರಿ ೮-೩೦ಕ್ಕೆ ಜರುಗಿದ್ದು ಇಲ್ಲಿನ ವಾತವರಣವನ್ನು ಕಲೂಷಿತಗೊಳಿಸಲು ಉದ್ದೇಶ ಪೂರ್ವಕವಾಗಿಯೆ ಈ ಕೃತ್ಯ ಎಸಗಿರುವ ಸಂದೇಹ ವ್ಯಕ್ತವಾಗಿದ್ದು ಮುನ್ನೆಚರಿಕೆ ಕ್ರಮವಾಗಿ ಪೋಲಿಸರು ಇಲ್ಲಿನ ಎಲ್ಲಾ ಚರ್ಚುಗಳಲ್ಲಿ ರಕ್ಕಷಣೆಗಾಗಿ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.





ಭಟ್ಕಳದ ಶ್ರೀರಾಮ ಸೇನೆಯು ಕಳೆದ ಒಂದು ದಿನದ ಹಿಂದೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲಿನ ಹಲ್ಲೆಯನ್ನು ಖಂಡಿಸಿ ರಾಷ್ಟ್ರಪತಿಗಳಿಗೆ ಮನವಿಯನ್ನು ಅರ್ಪಿಸುವ ಸಂದರ್ಭದಲ್ಲಿ ಅಲ್ಲಿ ಭಾರತೀಯರ ಮೇಲೆ ಹಲ್ಲೆ ನಡೆಸುವುದನ್ನು ನಿಲ್ಲಿಸದಿದ್ದರೆ ಭಟ್ಕಳದ ಚರ್ಚುಗಳ ಮೇಲೆ ದಾಳಿ ಮಾಡಿ ಅದನ್ನು ದ್ವಂಸಗೊಳಿಸುವುದಾಗಿ ಬೆದರಿಕೆಯನ್ನು ಹಾಕಿದ್ದು ಈ ಘಟನೆಗೂ ಅವರ ಹೇಳಿಕೆಗೂ ನೇರಸಂಭಂಧವನ್ನು ಕಲ್ಪಿಸಲಾಗುತ್ತಿದೆ.
ಈ ಕುರಿತು ಭಟ್ಕಳ ಡಿ.ವೈಎಸ್.ಪಿ ವೇದಮೂರ್ತಿಯವನ್ನು ವಿಚಾರಿಸಿದಾಗ ಅವರ ಹೇಳಿಕೆಗೂ ಇದಕ್ಕೂ ಸಂಬಂಧ ಇರಲೂಬಹುದು. ಅದಿನ್ನು ತನಿಖೆಯಿಂದಲೆ ತಿಳಿದುಬರಬೇಕಾಗಿದೆ ಎಂದರು. ಮುಂಜಾಗೃತ ಕ್ರಮವಾಗಿ ತಾಲೂಕಿನ ಎಲ್ಲಾ ಚರ್ಚುಗಳಲ್ಲಿ ಪೋಲಿಸ್ರರನ್ನು ನೀಯೋಜಿಸಿದ್ದು ಯಾವುದೆ ಅಹಿತಕರ ಘಟನೆ ಜರುಗದಂತೆ ಹಾಗೂ ಗಾಳಿ ಸುದ್ದಿಗೆ ಕಿವಿಗೊಡದಂತೆ ಅವರು ಮನವಿಯನ್ನು ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ತಿಳಿಸಿದರು.