ಭಟ್ಕಳ, ಡಿಸೆಂಬರ್ ೧೬: ಕಾನೂನು ಬಾಹಿರವಾಗಿ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ೧ಲಕ್ಷ ರೂ ಮೌಲ್ಯದ ಬೆಲೆಬಾಳುವ ನಂದಿ ಹಾಗೂ ಬೀಟೆ ಮರದ ಹಲಗೆಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆಯ ಸಿಬಂಧಿಗಳು ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಬೆಳಕೆ ಗ್ರಾ.ಪಂ ವ್ಯಾಪ್ತಿಯ ನೂಜ್ ನ ಗೋಯ್ದ ಮಾಸ್ತಿಗೊಂಡ ಎಂದು ಗುರುತಿಸಲಾಗಿದೆ.
ಖಚಿತಮಾಹಿತಿಯನ್ನಾಧರಿಸಿ ಇಂದು ಬೆಳಿಗ್ಗೆ ದಾಳಿ ಮಾಡಿದ ಅರಣ್ಯ ಸಿಬಂಧಿಯ ತಂಡವು ಆರೋಪಿತನಿಂದ ಬೆಲೆಬಾಳುವ ಮರದ ಕಟ್ಟಿಗೆಗಳನ್ನು ವಶಪಡಿಸಿಕೊಂಡಿದೆ ಈ ಕಾರ್ಯಚರಣೆಯಲ್ಲಿ ಅರಣ್ಯ ಸಿಬಂಧಿಗಳಾದ ಎ.ಸಿ.ಎಫ್. ತಾಂಡೇಲ್, ಆರ್.ಎಫ್.ಓ, ಎಮ್.ಜೆ ನಾಯ್ಕ, ಗುನಗಾ, ಶಾಖಾ ವನಪಾಲಕ ಪಿ.ಎಸ್.ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ವರದಿ: ಎಮ್ಮಾರ್ ಮಾನ್ವಿ, ಭಟ್ಕಳ