ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಕರ್ಕಶ ಶಬ್ದ ಮಾಡುವ ಬೈಕುಗಳಿಗೆ ತ್ರಿಶಂಕು ಸ್ವರ್ಗ ಚಿಕಿತ್ಸೆ

ಬೆಂಗಳೂರು: ಕರ್ಕಶ ಶಬ್ದ ಮಾಡುವ ಬೈಕುಗಳಿಗೆ ತ್ರಿಶಂಕು ಸ್ವರ್ಗ ಚಿಕಿತ್ಸೆ

Thu, 10 Dec 2009 02:58:00  Office Staff   S.O. News Service
ಬೆಂಗಳೂರು, ಡಿಸೆಂಬರ್ 9:ಕರ್ಕಶ ಶಬ್ದ ಮಾಡುತ್ತ ವಾಹನ ಚಲಾಯಿಸುವವರಿಗೆ ಪಾಠ ಕಲಿಸಲು ಕುಮಾರಸ್ವಾಮಿ ಲೇ‌ಔಟ್ ಪೊಲೀಸರು ಹೊಸ ವರಸೆ ಆರಂಭಿಸಿದ್ದಾರೆ.

ವಾಯು ಮಾಲಿನ್ಯದ ಜತೆಗೆ ಶಬ್ದ ಮಾಡಿ ದಾರಿಹೋಕರನ್ನು ಬೆದರಿಸುತ್ತಿದ್ದ ಕೆಲ ಯುವಕರನ್ನು ಹಿಡಿದು,ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್‌ನ ಸೈಲೆನ್ಸರ್ ಕಿತ್ತು ಠಾಣೆ ಎದುರಿನ ಮರಕ್ಕೆ ನೇತು ಹಾಕಲಾಗಿದೆ. ಜತೆಗೆ, ವಾಹನಗಳನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ.

ಜತೆಗೆ,ಎಚ್ಚರಿಕೆ ಸಂದೇಶವುಳ್ಳ ಫಲಕಗಳನ್ನು ಪ್ರದರ್ಶಿಸಲಾಗಿದೆ. ‘ಕುಮಾರಸ್ವಾಮಿ ಲೇ‌ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ಕರ್ಕಶ ಶಬ್ದ ಮಾಡುತ್ತ ವೃದಟಛಿರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಯುವತಿಯರಿಗೆ ಕಿರುಕುಳ ನೀಡುವವರಿಗೆ ಇದೇ ಸ್ಥಿತಿ ಬರುತ್ತದೆ’ ! ಸದ್ಯಕ್ಕೆ ಸೈಲೆನ್ಸರ್‌ಅನ್ನು ನೇತು ಹಾಕಿದ್ದೇವೆ.ಇದೇ ಚಾಳಿ ಮುಂದುವರಿಸಿದರೆ, ಕಿರುಕುಳ ನೀಡುವವರನ್ನೂ ನೇತು ಹಾಕಲಾಗುತ್ತದೆ ಎಂಬುದು ಫಲಕ ನೀಡುವ ಎಚ್ಚರಿಕೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾ ಗಿದೆ. ‘ಡರ್ರ್’ ಎಂದು ವಾಹನ ನುಗ್ಗಿಸುವವರ ಕುರಿತು ಮಾಹಿತಿ ನೀಡುವಂತೆ, ಠಾಣೆಯ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ.ಈ ಯೋಜನೆಯ ಹಿಂದಿರುವವರು- ಇನ್‌ಸ್ಪೆಕ್ಟರ್ ಬಾಬು ನರ್‍ಹೋನಾ. 
 
ಸೌಜನ್ಯ: ವಿಜಯ ಕರ್ನಾಟಕ

Share: