ಭಟ್ಕಳಫೆಬ್ರವರಿ ೧೩, ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ತ ವ್ಯಾಪ್ತಿಯ ತೆಂಗಿನಗುಂಡಿ ಮುಖ್ಯ ರಸ್ತೆಯಲ್ಲಿರುವ ನಮಸ್ತೆ ಜನರಲ್ ಸ್ಟೋರ್ ದಿನಸಿ ಅಂಗಡಿಯಲ್ಲಿ ರಾತ್ರಿ ಸಮಯ ಒಳಗಿಂದಲೆ ಬೆಂಕಿ ಬಿದ್ದು ಸುಮಾರು ೨.೫೦ ಲಕ್ಷ ರೂ ಹಾನಿ ಸಂಭವಿಸಿದೆ. ಈ ಅಂಗಡಿಯು ಲಕ್ಷಣ ನಾಗಪ್ಪ ನಾಯ್ಕ ಎಂಬುವವರಿಗೆ ಸೇರಿದ್ದಾಗಿದ್ದು ಇವರು ಶುಕ್ರವಾರ ರಾತ್ರಿ ಸುಮಾರು ೧೦.೩೦ಕ್ಕೆ ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಿದ್ದು ಶನಿವಾರ ಬೆಳಗ್ಗೆ ಎಂದಿನಂತೆ ಅಂಗಡಿಯನ್ನು ತೆಗೆಯಲು ಬಂದಾಗ ಈ ಅನಾಹುತ ಸಂಭವಿಸಿದ್ದು ಅವರ ಗಮನಕ್ಕೆ ಬಂದಿದೆ.
ಅಂಗಡಿಯಲ್ಲಿ ಒಂದು ಫ್ರಿಡ್ಜ್ ಸೇರಿದಂತೆ ಮಾರಾಟ ಮಾಡಲು ಇರುವ ಅಕ್ಕಿ ಗೋದಿ, ಸಕ್ಕರೆ ಮತ್ತಿರ ವಸ್ತುಗಳು ಸಂಪೂರ್ಣ ಸುಟ್ಟುಹೋಗಿವೆ. ವಿದ್ಯುತ್ ಶಾರ್ಟ್ ಸೆರ್ಕ್ಯೂಟ್ ನಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ತನಿಖೆಯ ಬಳಿಕವಷ್ಟೇ ಇದರ ಸತ್ಯಾಸತ್ಯತೆ ತಿಳಿಯಬಹುದಾಗಿದೆ.