ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಚಿಕ್ಕಬಳ್ಳಾಪುರ: ಉತ್ತಮ ಸೌಹಾರ್ದತೆಯಿಂದ ಅಪರಾಧಗಳನ್ನು ತಡೆಯಬಹುದು : ಡಿವೈ‌ಎಸ್‌ಪಿ

ಚಿಕ್ಕಬಳ್ಳಾಪುರ: ಉತ್ತಮ ಸೌಹಾರ್ದತೆಯಿಂದ ಅಪರಾಧಗಳನ್ನು ತಡೆಯಬಹುದು : ಡಿವೈ‌ಎಸ್‌ಪಿ

Sun, 20 Dec 2009 02:20:00  Office Staff   S.O. News Service
ಚಿಕ್ಕಬಳ್ಳಾಪುರ, ಡಿಸೆಂಬರ್ 19:  ಸಾರ್ವಜನಿಕರು ಪೊಲೀಸರೊಂದಿಗೆ ಉತ್ತಮ ಸೌಹಾರ್ಧ ಬಾಂದವ್ಯವನ್ನು ಹೊಂದಿದ್ದರೆ ಮಾತ್ರ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಡಿವೈ‌ಎಸ್‌ಪಿ ದುಗ್ಗಪ್ಪ ಅಭಿಪ್ರಾಯಪಟ್ಟರು.
 
ಮಂಚೇನಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಅಪರಾಧ ತಡೆ ಮಾಸಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾರ್ವಜನಿಕರಲ್ಲಿ ಅಪರಾಧಗಳ ಬಗ್ಗೆ ಹಾಗೂ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು. 
 
ಡಿ.ಸಿ.ಸಿ ಬ್ಯಾಂಕ್‌ನ ನಿರ್ದೇಶಕ ಜರಬಂಡನಹಳ್ಳಿ ಹನುಮೇಗೌಡ ಮಾತನಾಡಿ, ಯುವಕರು, ವಿದ್ಯಾರ್ಥಿಗಳು ಐಷಾರಾಮಿ ಜೀವನದ ಮೋಜಿಗಾಗಿ ಹಾಗೂ ಹಣದ ಕೊರತೆಯಿಂದ ಅಪರಾಧಗಳಲ್ಲಿ ತೊಡಗುತ್ತಿರುವುದು ವಿಷಾದನೀಯ ಸಂಗತಿ ಎಂದ ಅವರು ಇವರನ್ನು ಸರಿಯಾದ ದಾರಿಗೆ ತರಲು ಪೋಷಕರ ಹಾಗೂ ಶಿಕ್ಷಕರು ಶ್ರಮಿಸಬೇಕು ಎಂದರು.
 
ಗೌರಿಬಿದನೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಮೂರ್ತಿ ಮಾತನಾಡಿ, ಅಪರಾಧಗಳನ್ನು ತಡೆಗಟ್ಟಲು ಅನಕ್ಷರಸ್ಥರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಅಪರಾಧಗಳ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದ ಅವರು ಸಮಾಜ ವಿದ್ರೋಹಿಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಪರಾಧಗಳನ್ನು ತಡೆಗಟ್ಟಲು ನೆರವಾಗಬೇಕೆಂದು ಕೋರಿದರು.
 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಚೇನಹಳ್ಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಂಜುಂಡಯ್ಯ ಮಾತನಾಡಿ, ಯುವ ಜನರು ದುಶ್ಚಟಗಳಿಗೆ ದಾಸರಾಗದೆ. ಸಜ್ಜನರ ಸಂಗ ಬೆಳಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿದರು.
 
ಈ ಸಮಾರಂಭದಲ್ಲಿ ಪ್ರೌಡಶಾಲಾ ಶಿಕ್ಷಕ ನಂಧೀಶ್ವರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಪ್ಪ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮಂಚೇನಹಳ್ಳಿ ಠಾಣಾ ಸಬ್ ಇನ್ಸ್‌ಪೆಕ್ಟರ್ ಡಿ.ಹೆಚ್.ಮುನಿಕೃಷ್ಣ ಸ್ವಾಗತಿಸಿ, ಶಿಕ್ಷಕ ಪ್ರಕಾಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣಪ್ಪ ವಂದಿಸಿದರು. 


Share: