ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕೋಲಾರ:ಚರ್ಚ್ ದಾಳಿಗಳ ಹಿಂದೆ ಕೋಮುವಾದಿಗಳ ಕೈವಾಡ: ವರ್ತೂರು

ಕೋಲಾರ:ಚರ್ಚ್ ದಾಳಿಗಳ ಹಿಂದೆ ಕೋಮುವಾದಿಗಳ ಕೈವಾಡ: ವರ್ತೂರು

Wed, 03 Feb 2010 03:17:00  Office Staff   S.O. News Service
ಕೋಲಾರ,ಫೆ. ೨: ರಾಜ್ಯಾದ್ಯಂತ ಚರ್ಚ್‌ಗಳ ಮೇಲೆ ದಾಳಿ ನಡೆದಿರು ವುದರ ಹಿಂದೆ ಕೋಮುವಾದಿಗಳ ಕೈವಾಡವಿದೆ ಎಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಆರೋಪಿಸಿದ್ದಾರೆ.

ನಗರದ ಮೆಥೋಡಿಸ್ಟ್ ಶಾಲಾ ಆವರಣದಲ್ಲಿ ೩ ದಿನಗಳ ಕಾಲ ನಡೆಯಲಿರುವ ಶುಭ ಸಂದೇಶ ಕೂಟಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಇಷ್ಟೊಂದು ಮುಂದು ವರಿದಿದ್ದರೂ ಪೊಲೀಸ್ ಇಲಾಖೆ ಚರ್ಚ್‌ಗಳ ಮೇಲೆ ದಾಳಿ ನಡೆಸಿದವರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಇದು ರಾಜ್ಯದ ದುರಂತ ಎಂದು ವಿಷಾದಿಸಿದ ಅವರು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಿರಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೋಮುವಾದಿ ಶಕ್ತಿಗಳನ್ನು ಬಗ್ಗುಬಡಿಯಬೇಕಾಗಿದೆ ಎಂದು ಕರೆ ನೀಡಿದರು.

‘ಶುಭ ಸಂದೇಶ’ ಎಂಬ ಮೂರು ದಿನಗಳ ಕಾರ್ಯಕ್ರಮದಲ್ಲಿ ಬಳ್ಳಾರಿಯ ರಾಮ್ ಬಾಬು ಜಿಲ್ಲೆಯ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕ್ರೈಸ್ತರಿಗೆ ಕ್ರಿಸ್ತನ ಸಂದೇಶಗಳನ್ನು ಸಾರಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ವಕೀಲ ಕೃಷ್ಣೇಗೌಡ, ಧರ್ಮಗರು ಸ್ಯಾಮುವೇಲ್, ಧೂಳಪ್ಪ, ವ್ಯವಸ್ಥಾಪಕ ಸ್ಟಾಂಡ್ಲಿ, ಸುಧೀರ್ ಹಾಜರಿದ್ದರು. ವ್ಯವಸ್ಥಾಪಕ ಎ.ಸದಾನಂದ ಸ್ವಾಗತಿಸಿ ವಂದಿಸಿದರು.

Share: