ಭಟ್ಕಳ, ಅಕ್ಟೋಬರ್ ೮: ನಗರದ BIFA (Bhatkal Inter Football Association) ಸಂಘಟನೆ ಇದೇ ತಿಂಗಳ ೨೯ ಮತ್ತು ೩೦ ರಂದು ಎರೆಡು ದಿನಗಳ ತಾಲ್ಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿದೆ.
ಸಂಘದ ಪ್ರಮುಖ ಸದಸ್ಯರಾದ ಡಾ. ಅಫಾಖ್ ಲಂಕಾ ರವರು ಈ ಪ್ರಕಟಣೆಯನ್ನು ಹೊರಡಿಸಿದ್ದು ಅಂತಿಮ ಪಂದ್ಯ ೩೦ ನೇ ಶುಕ್ರವಾರ ಸಂಜೆ ನಾಲ್ಕೂವರೆಗೆ ಭಟ್ಕಳದ ವೈ ಎಂ ಎಸ್ ಎ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬಿ.ಐ.ಎಫ್.ಎ. ಸಂಘಟನೆ ಫುಟ್ಬಾಲ್ ಕ್ರೀಡಾಪ್ರಿಯ ವ್ಯಕ್ತಿಗಳ ಒಂದು ಕೂಟವಾಗಿದ್ದು ನಗರದಲ್ಲಿ ಯುವಜನತೆಯಲ್ಲಿ ಫುಟ್ಬಾಲ್ ಬಗ್ಗೆ ಒಲವು ಮೂಡಿಸುವತ್ತ ಪ್ರಯತ್ನ ನಡೆಸುತ್ತಿದೆ.
ಸಂಘಟನೆ ನಡೆಸುತಿರುವ ಇದು ಎರಡನೆಯ ಪಂದ್ಯಾವಳಿಯಾಗಿದ್ದು ಕಳೆದ ಅಕ್ಟೋಬರ್ ನಲ್ಲಿ ನಡೆದ ಪ್ರಥಮ ಪಂದ್ಯಾವಳಿ ಯುವಜನತೆಯ ಮನಸೆಳೆದಿತ್ತು. ಕಳೆದ ವರ್ಷ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ಈ ವರ್ಷ ಹೆಚ್ಚಿನ ತಂಡಗಳು ಭಾಗವಹಿಸಬಹುದೆಂದು ನಿರೀಕ್ಷಿಸಲಾಗಿದೆ.
ಭಾಗವಹಿಸಲಿಚ್ಛಿಸುವ ತಂಡಗಳು ಡಾ. ಅಫಾಖ್ ಲಂಕಾರವರನ್ನು ಅವರ ದೂರವಾಣಿ 9886004526 ಅಥವಾ ಈ ಮೇಲ್ ವಿಳಾಸ: aafaaque@gmail.com ದ ಮೂಲಕ ಸಂಪರ್ಕಿಸಬಹುದಾಗಿದೆ.