ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳದಲ್ಲಿ ೭೭ ನಾಮಪತ್ರಗಳು ಅಸ್ವೀಕೃತ : ೯೨೭ ನಾಮಪತ್ರ ಕ್ರಮ ಬದ್ಧ

ಭಟ್ಕಳದಲ್ಲಿ ೭೭ ನಾಮಪತ್ರಗಳು ಅಸ್ವೀಕೃತ : ೯೨೭ ನಾಮಪತ್ರ ಕ್ರಮ ಬದ್ಧ

Fri, 30 Apr 2010 11:02:00  Office Staff   S.O. News Service
ಭಟ್ಕಳದಲ್ಲಿ ೭೭ ನಾಮಪತ್ರಗಳು ಅಸ್ವೀಕೃತ : ೯೨೭ ನಾಮಪತ್ರ ಕ್ರಮ ಬದ್ಧ 
ಭಟ್ಕಳ; ಭಟ್ಕಳದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸಲ್ಲಿಕೆಯಾಗಿರುವ ೧೦೦೪ ನಾಮಪತ್ರದಲ್ಲಿ ೧೮ ನಾಮಪತ್ರಗಳು ತಿರಸ್ಕೃತಗೊಂಡರೆ,೫೯ ನಾಮಪತ್ರಗಳು ವಿವಿಧ ಕಾರಣಗಳಿಗೆಗಾಗಿ ಅಸ್ವೀಕೃತಗೊಂಡಿದ್ದು ೧೬ ಪಂಚಾಯತಿಗಳಲ್ಲಿನ ೭೫ ವಾರ್ಡುಗಳ ೩೦೧ ಸ್ಥಾನಕ್ಕೆ ಅಂತಿಮವಾಗಿ ಒಟ್ಟೂ ೯೨೭ ನಾಮಪತ್ರಗಳು ಸ್ವೀಕೃತಗೊಂಡಿದ್ದು, ಚುನಾವಣಾ ಅಖಾಡ ರಂಗೇರುವಂತೆ ಮಾಡಿದೆ.
ತಾಲೂಕಿನ ಬೈಲೂರು ಪಂಚಾಯತ್‌ನಲ್ಲಿ ೨,ಕಾಯ್ಕಿಣಿಯಲ್ಲಿ ೩,ಹೆಬಳೆಯಲ್ಲಿ ೩,ಜಾಲಿ,ಮಾವಿನಕುರ್ವೆಯಲ್ಲಿ ತಲಾ ೨,ಮಾರೂಕೇರಿಯಲ್ಲಿ ೧,ಕೋಣಾರ, ಬೆಳಕೆಯಲ್ಲಿ ತಲಾ ೨, ಹಾಡುವಳ್ಳಿಯಲ್ಲಿ ೧ ನಾಮಪತ್ರಗಳು ತಿರಸ್ಕೃತಗೊಂಡಿದೆ. ಈ ಸಲ ಎಲ್ಲಾ ಪಮಚಾಯತಿಗಳಲ್ಲೂ ಒಂದು ಸ್ಥಾನಕ್ಕೆ ಮೂರ‍್ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸುವುದರ ಮೂಲಕ ಜಿದ್ದಾಜಿದ್ದಿಯ ಪೈಪೋಟಿ ಏರ್ಪಟ್ಟಿದೆ. ಬೈಲೂರಿನ ೧೫ ಸ್ಥಾನಕ್ಕೆ ೪೪ ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಮಾವಳ್ಳಿಯ ೩೯ ಸ್ಥಾನಕ್ಕೆ ೧೦೮, ಕಾಯ್ಕಿಣಿಯ ೨೪ ಸ್ಥಾನಕ್ಕೆ ೮೪, ಕೊಪ್ಪದ ೯ ಸ್ಥಾನಕ್ಕೆ ೨೩, ಬೇಂಗ್ರೆಯ ೨೦ ಸ್ಥಾನಕ್ಕೆ ೬೦, ಶಿರಾಲಿಯ ೩೪ ಸ್ಥಾನಕ್ಕೆ ೧೦೮, ಹೆಬಳೆಯ ೨೪ ಸ್ಥಾನಕ್ಕೆ ೬೨, ಜಾಲಿಯ ೪೦ ಸ್ಥಾನಕ್ಕೆ ೯೭ ಅಭ್ಯರ್ಥಿಗಳು, ಮಾವಿಕುರ್ವೆಯ ೧೪ ಸ್ಥಾನಕ್ಕೆ ೫೧, ಮುಂಡಳ್ಳಿಯ ೧೩ ಸ್ಥಾನಕ್ಕೆ ೬೬, ಯಲ್ವಡಿಕವೂರಿನ ೧೬ ಸ್ಥಾನಕ್ಕೆ ೪೬, ಮುಟ್ಟಳ್ಳಿಯ ೧೨ ಸ್ಥಾನಕ್ಕೆ ೪೪, ಮಾರೂಕೇರಿಯ ೮ ಸ್ಥಾನಕ್ಕೆ ೨೭, ಕೋಣಾರದ ೮ ಸ್ಥಾನಕ್ಕೆ ೨೨, ಬೆಳಕೆಯ ೧೬ ಸ್ಥಾನಕ್ಕೆ ೫೭, ಹಾಡುವಳ್ಳಿಯ ೯ ಸ್ಥಾನಕ್ಕೆ ೨೮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮೇಲಿನ ಅಂಕಿ ಅಂಶಗಳನ್ನು ಗಮನಿಸಿದರೆ ಎಲ್ಲಾ ೧೬ ಗ್ರಾಮ ಪಂಚಾಯತ್‌ಗಳಲ್ಲೂ ತೀವ್ರ ಪೈಪೋಟಿ ಏರ್ಪಟ್ಟಿದ್ದು ಸ್ಪಷ್ಟವಾಗುತ್ತದೆ. ವಿಶೇಷವೆಂದರೆ ಅತಿ ದೊಡ್ಡ ಪಂಚಾಯತ್ ಆದ ಜಾಲಿಯ ೪೦ ಸ್ಥಾನದಲ್ಲಿ ೧೭ ಸ್ಥಾನಗಳು ಈಗಾಗಲೇ ಅವಿರೋಧಗೊಂಡಿದ್ದರೆ, ಉಳಿದ ಗ್ರಾಮ ಪಂಚಾಯತಿಯಲ್ಲಿಯೂ ಕೆಲವು ಮೀಸಲಾತಿ ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದೆ ಎಂದು ತಿಳಿದು ಬಂದಿದೆ. ಮೇ ೩ ರಂದು ನಾಮಪತ್ರ ವಾಪಾಸಾತಿಗೆ ಅಂತಿಮ ದಿನವಾಗಿದ್ದು, ಯಾವ ಪಂಚಾಯತಿಗಳಲ್ಲಿ ಯಾರು ವಾಪಾಸು ತೆಗೆಯುತ್ತಾರೆ ಎಂಬುದು ಗೊತ್ತಾಗಲಿದೆ. ಈಗಾಗಲೇ ಕೆಲವು ಪಂಚಾಯತಗಳಲ್ಲಿ ನಾಮಪತ್ರ ವಾಪಾಸಾತಿಗೆ ಹಣ ಮುಂತಾದ ಆಮಿಷಗಳೂ ತೋರಿಸಲಾಗುತ್ತಿರುವುದು ತಿಳಿದು ಬಂದಿದೆ. ಇನ್ನೂ ಕೆಲವು ಪಂಚಾಯತ್‌ಗಳಲ್ಲಿ ಸುಮ್ಮನೇ ಚುನಾವಣೆ ಎದುರಿಸುವುದಕ್ಕಿಂತ ಅವಿರೋಧ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯಗಳೂ ಕೇಳಿ ಬಂದಿದೆ. ಆದರೆ ಹೆಚ್ಚಿನ ಸ್ಪರ್ಧಿಗಳು ಕಣದಲ್ಲಿರುವುದರಿಂದ ಅವಿರೋಧ ಆಯ್ಕೆ ಕಷ್ಟ ಸಾಧ್ಯವೇ ಎನ್ನಬಹುದು.


Share: