ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಮುಂದುವರೆದ ಚರ್ಚ್ ಧಾಳಿ - ಈಗ ತೆರ್ನಮಕ್ಕಿಯಲ್ಲಿ ಮೇರಿ ಮಾತೆ ವಿಗ್ರಹ ಧಕ್ಕೆಗೆ ಯತ್ನ

ಭಟ್ಕಳ: ಮುಂದುವರೆದ ಚರ್ಚ್ ಧಾಳಿ - ಈಗ ತೆರ್ನಮಕ್ಕಿಯಲ್ಲಿ ಮೇರಿ ಮಾತೆ ವಿಗ್ರಹ ಧಕ್ಕೆಗೆ ಯತ್ನ

Mon, 25 Jan 2010 17:33:00  Office Staff   S.O. News Service
ಭಟ್ಕಳ, ಜನವರಿ 25:  ಭಟ್ಕಳ ತಾಲೂಕಿನಲ್ಲಿ ಚರ್ಚುಗಳ ಮೇಲಿನ ದಾಳಿಯು ಮುಂದುವರಿದ್ದು ರವಿವಾರ ಹಾಗೂ ಸೋಮವಾರದ ರಾತ್ರಿಯ ಸಮಯದಲ್ಲಿ ತಾಲುಕಿನ ತೆರ್‍ನಮಕ್ಕಿ ಎಂಬಲ್ಲಿ ಚರ್ಚ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಚರ್ಚ್‌ನ ಮುಂದೆ ಸ್ಥಾಪಿಸಿರುವ ಮೇರಿ ಮಾತೆಯ ಮೂರ್ತಿಯನ್ನು ಭಗ್ನಗೊಳಿಸಲು ಪ್ರಯತ್ನಿಸಿ ಅದಕ್ಕೆ ಹಾಕಿರುವ ಗಾಜನ್ನು ಕಲ್ಲಿನಿಂದ ಜಖಂಗೊಳಿಸಿದ್ದಾರೆ. ಆದರೆ ಮೇರಿ ಮಾತೆ ಮೂರ್ತಿಗೆ ಯಾವುದೇ ಧಕ್ಕೆಯು ಉಂಟಾಗಲಿಲ್ಲ.
 
 25-bkl-02.jpg 
 
ಜ.೨೨ ಶುಕ್ರವಾರ ರಾತ್ರಿ  ತಾಲೂಕಿನ ಮುಂಡಳ್ಳಿಯ ಸಮೀಪದ ಗುಡ್ಡದ ಮೇಲಿರುವ ಶಿಲುಬೆಯನ್ನು ದ್ವಂಸಗೊಳಿಸಿದ್ದ ನೋವು ಇಲ್ಲಿನ ಕ್ರೈಸ್ತ ಸಮುದಾಯವು ಮರೆಯುದಕ್ಕೆ ಮುಂಚೆ ಅವರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮತ್ತೊಂದು ಘಟನೆ ಜರುಗಿದ್ದು  ಇಲ್ಲಿನ ಶಾಂತಿಪ್ರೀಯ ಕ್ರೈಸ್ತರಲ್ಲಿ ಆತಂಕವನ್ನು ಮೂಡಿಸಿದೆ ರಾಮಸೇನೆಯು ಚರ್ಚುಗಳ ಮೇಲೆ ದಾಳಿಮಾಡುವುದಾಗಿ ಬೆದರಿಕೆಯನ್ನು ಒಡ್ಡಿದ ಹೆನ್ನೆಲೆಯಲ್ಲಿ ತಾಲೂಕಿನ ಎಲ್ಲ ಚರ್ಚುಗಳಿಗೂ ಪೋಲಿಸ್ ಭದ್ರತೆಯನ್ನು ಒದಗಿಸಲಾಗಿತ್ತು ಎನ್ನಲಾಗಿದ್ದು ಆದರೆ ಪೋಲಿಸ್ ಕಾವಲಿನ ಮಧ್ಯೆಯು ಇಂತಹದ್ದೊಂದು ಘಟನೆ ಸಂಭವಿಸಿದ್ದು ಕ್ರೈಸ್ತ ಸಮುದಾಯದ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಸ್ಥಳಿಯರ ಪ್ರಕಾರ ರವಿವಾರ ರಾತ್ರಿ ಏನೋ ಒಡೆದ ಶಬ್ದ ಕೇಳಿ ಬಂತು ಹೆದ್ದಾರಿಯಲ್ಲಿ ಇಂತಹ ಶಬ್ದ ದಿನನಿತ್ಯ ಕೇಳಿಬರುತ್ತಲೆ ಇರುತ್ತದೆ ಇದು ಸಹ ಅಂತಹದ್ದೆ ಎಂದು ಭಾವಿಸಲಾಗಿತ್ತು ಆದರೆ ಬೆಳಗ್ಗೆ ಇಲ್ಲಿನ ಮೇರಿಮಾತೆಯ ಗಾಜು ಜಖಂಗೊಂಡಿದ್ದು ಕಂಡು ಬಂತು  ರಾತ್ರಿ ಇಲ್ಲಿ ಯಾವದೆ ಪೋಲಿಸರಾಗಲಿ ರಕ್ಷಕರಾಗಲಿ ಇರಲಿಲ್ಲ ಎಂದು ಸ್ಥಳಿಯರು ಹೇಳುತ್ತಾರೆ. 
 
ಘಟನೆಗೆ ಸಂಬಂಧಿಸಿದಂತೆ ಡಿವೈ‌ಎಸ್‌ಪಿ ವೇದಮೂರ್ತಿಯವರನ್ನು ಸಂಪರ್ಕಿಸಿದಾಗ ರಾತ್ರಿಯ ವೇಳೆ ಆ ಸ್ಥಳದಲ್ಲಿ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿತ್ತು ಘಟನೆಯು ಮಧ್ಯ ರಾತ್ರಿಯಲ್ಲಿ ಜರುಗಿದ್ದರಿಂದ ಅವರಿಗೆ ಈ ವಿಷಯ ತಿಳಿದಿರಲಿಕ್ಕಿಲ್ಲ ಎಂದಿದ್ದಾರೆ. ಆದರೆ ಶ್ರೀರಾಮ ಸೇನೆಯ ಶಂಕರ್ ನಾಯ್ಕ ಎಂಬಾತನು ಕಳೆದ ಒಂದುದಿನದ ಹಿಂದೆಯಷ್ಟೆ ದೃಶ್ಯ ಮಾಧ್ಯಮವೊಂದಕ್ಕೆ ದೂರವಾಣಿ ಕೆರ ಮಾಡಿ ಮುಂಡಳ್ಳಿ ಶಿಲುಭೆಯನ್ನು ದ್ವಂಸಗೈದಿದ್ದು ತಾವೆ ಎಂದು ಒಪ್ಪಿಕೊಂಡು ಇದು ಸ್ಯಾಂಪಲ್ ಮಾತ್ರ ಆಸ್ಟ್ರೇಲಿಯಾದಲ್ಲಿ ಹಿಂದುಗಳ ಮೇಲಿನ ದಾಳಿಯು ನಿಲ್ಲದೆ ಹೋದರೆ ನಾವು ಮತ್ತಷ್ಟು ಚರ್ಚುಗಳ ಮೇಲೆ ದಾಳಿಯನ್ನು ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದನು ಆಗ ಪೋಲಿಸರು ಕೂಡಲೆ ಕಾರ್ಯಪ್ರವೃತ್ತಗೊಂಡು ಶಂಕರ್ ನಾಯ್ಕನನ್ನು ಬಂಧಿಸುವಲ್ಲಿ ಯಾಸಸ್ವಿಯಾಗಿದ್ದರು. ಅದರ ಮರುದಿನವೆ ಮತ್ತೊಂದು ಚರ್ಚು ಮೇಲೆ ದಾಳಿ ಸಂಭವಿಸಿರುವುದು ಈ ಕೃತ್ಯವನ್ನು ಸಹ ಶ್ರೀರಾಮ ಸೇನೆಯೆ ಮಾಡಿರಬಹುದಾದ ಸಾಧ್ಯತೆಗಳಿವೆ ಎಂಬ ಸಂಶಯ ಜನರಲ್ಲಿ ಮನೆಮಾಡಿಕೊಳ್ಳುತ್ತಿದೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ. 


Share: