ಬೆಂಗಳೂರು, ಏಪ್ರಿಲ್ ೨೩, ವಾರ್ತಾ ಇಲಾಖೆಯಿಂದ ಏಪ್ರಿಲ್ ೨೪ ರಂದು ಸಂಜೆ ೬.೦೦ ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ “ಡಾ ರಾಜ್‌ಕುಮಾರ್ ಅವರ ೮೨ ನೇ ಜನ್ಮ ದಿನಾಚರಣೆ” ಸಮಾರಂಭವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಉದ್ಫಾಟಿಸಲಿದ್ದಾರೆ.
ಸಮಾರಂಭದಲ್ಲಿ ವಾರ್ತಾ, ವಸತಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಬೆಂಗಳೂರು ಜಲಮಂಡಳಿ ಸಚಿವ ಶ್ರೀ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾರಿಗೆ ಸಚಿವ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಆರ್. ಅಶೋಕ್, ಚಲನಚಿತ್ರ ನಿರ್ಮಾಪಕಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ ಜಯಮಾಲ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪದ್ಮಶ್ರೀ ಪುರಸ್ಕೃತ ನಾಡೋಜ ಪ್ರೊ ಕೆ.ಎಸ್. ನಿಸಾರ್ ಅಹಮದ್ ಪ್ರಧಾನ ಭಾಷಣ. ಭಾಷಣ ಮಾಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಚಿಕ್ಕಪೇಟಿ ವಿಧಾನಸಭಾ ಸದಸ್ಯ ಡಾ ಡಿ. ಹೇಮಚಂದ್ರಸಾಗರ್ ಅವರು ವಹಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಮುಖ್ಯಮಂತ್ರಿ ಚಂದ್ರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಶ್ರೀ ಜಗ್ಗೇಶ್, ವಿಧಾನ ಪರಿಷತ್ ಸದಸ್ಯರಾದ ಡಾ ಶ್ರೀನಾಥ್ ಹಾಗೂ ಡಾ ದೊಡ್ಡರಂಗೇಗೌಡ, ಲೋಕಸಭಾ ಸದಸ್ಯ ಶ್ರೀ ಪಿ.ಸಿ. ಮೋಹನ್ ಅವರು ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.
ಸಮಾರಂಭದಲ್ಲಿ ವಿ. ಮನೋಹರ, ಚಲನಚಿತ್ರ ಸಾಹಿತಿ ಇವರಿಂದ ಅಪರೂಪ ಜನಪ್ರಿಯ ಚಿತ್ರಗಳ ಗೀತಗುಚ್ಚ ಹಾಗೂ ತುಣುಕು ಪ್ರದರ್ಶನ. ನೃತ್ಯ ನಿರ್ದೇಶಕರಾದ ತ್ರಿಭುವನ್ ತಂಡದವರಿಂದ ಜನಪ್ರಿಯ ಗೀತೆಗಳ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.