ಮಂಗಳೂರು, ಜ.೩: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ವಿರುವ ನಾಡಿನ ಮೂಲ ನಿವಾಸಿ ಗಳಾದ ಬ್ಯಾರಿ ಸಮುದಾಯಕ್ಕೆ ‘ಬಂಟ್ವಾಳ’ ಹೃದಯವಿದ್ದಂತೆ. ಮಂಗಳೂರನ್ನು ಕೇಂದ್ರವಾಗಿಸಿಕೊಂಡು ವ್ಯಾಪಾರದಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದ ಪೂರ್ವಜರು ತದನಂತರ ಬಂಟ್ವಾಳ ವನ್ನು ಆಯ್ಕೆ ಮಾಡಿ ಕೊಂಡಿದ್ದರು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್ಮಾನ್ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಸುರಿಬೈಲು ದಾರುಲ್ ಅಶ್ ಅರಿಯ್ಯದಲ್ಲಿ ಶುಕ್ರವಾರ ರಾತ್ರಿ ಅಕಾಡಮಿ ಆಶ್ರಯ ದಲ್ಲಿ ನಡೆದ ಬ್ಯಾರಿ ಜನಪದ ಉತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಬ್ಯಾರಿ ಸಂಸ್ಕೃತಿ ಕೂಡಾ ಇಸ್ಲಾಮೀ ಸಂಸ್ಕೃತಿಯಾಗಿದೆ. ಕೆಲವು ತುಳು ಸಂಸ್ಕೃತಿ ಗಳು ನುಸುಳಿಕೊಂಡಿದ್ದರೂ ಧಾರ್ಮಿ ಕತೆಗೆ ಕಿಂಚಿತ್ತೂ ಚ್ಯುತಿಯಾಗಲಿಲ್ಲ ಎಂದು ಅಬ್ದುಲ್ ರಹ್ಮಾನ್ ನುಡಿದರು.
ಬ್ಯಾರಿ ಜನಪದ ಉತ್ಸವ ಉದ್ಘಾ ಟಿಸಿ ಮಾತನಾಡಿದ ಶಾಸಕ ಬಿ.ರಮಾನಾಥ ರೈ, ಬಂಟ್ವಾಳದ ಬ್ಯಾರಿಗಳಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕತೆಯ ಅಭಿರುಚಿ ಇದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಸ್ತೋಮ ಸಾಕ್ಷಿ ಎಂದರು.
ಮುಖ್ಯ ಅತಿಥಿಗಳಾಗಿ ರಕಂಭ ಗ್ರಾ.ಪಂ. ಅಧ್ಯಕ್ಷ ಇಂತು ಮಸ್ಕರೇನ್ಹಸ್ ಭಾಗವಹಿಸಿದ್ದರು.
ಅಕಾಡಮಿಯ ‘ಬೆಲ್ಕಿರಿ’ ತ್ರೈಮಾಸಿಕ ದ್ವಿತೀಯ ಸಂಚಿಕೆಯನ್ನು ದಾರುಲ್ ಅಶ್ ಅರಿಯ್ಯ ವ್ಯವಸ್ಥಾಪಕ ಮುಹಮ್ಮದಾಲಿ ಸಖಾಫಿ ಬಿಡುಗಡೆಗೊಳಿಸಿದರು. ನೌಫಲ್ ಉಮರ್ ಹೊರತಂದ ‘ಕಣ್ಣ್ಡೋ ರಾಣಿ’ ಬ್ಯಾರಿ ಡಿಯೊ ಸಿ.ಡಿ.ಯನ್ನು ತಾ.ಪಂ. ಸದಸ್ಯ ಚಂದ್ರಹಾಸ ಶೆಟ್ಟಿ ಬಿಡುಗಡೆ ಮಾಡಿದರು.
ಸಾಹಿತಿ ಹಾಜಿ ಅಬ್ದುಲ್ ಖಾದರ್ ಗೋಳ್ತಮಜಲು, ಹಾಡುಗಾರ ರಹೀಂ ಬಿ.ಸಿ.ರೋಡ್, ದಫ್ ತರಬೇತುದಾರ ಇಸ್ಮಾಯೀಲ್ ಮುಸ್ಲಿಯಾರ್ ಸುರಿಬೈಲು ಇವರನ್ನು ಅಭಿನಂದಿಸಲಾಯಿತು. ಇದೇ ವೇಳೆ ದಕ್ಷಿಣ ಮತ್ತು ಉಡುಪಿ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಯಿತು. ಬ್ಯಾರಿ ಜಾನಪದ ಹಾಡುಗಳು ಪ್ರೇಕ್ಷಕರಲ್ಲಿ ಹೊಸ ಹುರುಪು ನೀಡಿತು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ನ ಅಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ ಸ್ವಾಗತಿಸಿ ದರು. ಪಿ.ಎ.ರಹೀಂ, ರಿಜಿಸ್ಟ್ರಾರ್ ಚಂದ್ರಹಾಸ ರೈ. ಬಿ.ಉಪಸ್ಥಿತರಿದ್ದರು. ಅಕಾಡಮಿಯ ಸದಸ್ಯ ಪಿ.ಮುಹಮ್ಮದ್ ವಂದಿಸಿದರು. ಅಬ್ದುರ್ರಝಾಕ್ ಅನಂತಾಡಿ ಮತ್ತು ಬಿ.ಎಂ.ತುಂಬೆ ಕಾರ್ಯಕ್ರಮ ನಿರೂಪಿಸಿದರು.