ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗಾಯತ್ರಿ ಮಂತ್ರ ಎಲ್ಲೆಡೆ ಪಸರಿಸುವಂತೆ ಆಗಬೇಕು........ಬ್ರಹ್ಮಾನಂದ ಶ್ರೀ ಸಾರದೊಳೆಯಲ್ಲಿ ಗಾಯತ್ರಿ ಮಹಾಯಜ್ಞ ,ಗುರುಪೂಜೆ ಕಾರ್ಯಕ್ರಮ

ಗಾಯತ್ರಿ ಮಂತ್ರ ಎಲ್ಲೆಡೆ ಪಸರಿಸುವಂತೆ ಆಗಬೇಕು........ಬ್ರಹ್ಮಾನಂದ ಶ್ರೀ ಸಾರದೊಳೆಯಲ್ಲಿ ಗಾಯತ್ರಿ ಮಹಾಯಜ್ಞ ,ಗುರುಪೂಜೆ ಕಾರ್ಯಕ್ರಮ

Sun, 02 May 2010 11:06:00  Office Staff   S.O. News Service

ಭಟ್ಕಳ: ಗಾಯತ್ರಿ ಮಂತ್ರ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಈ ಮಂತ್ರ ಎಲ್ಲೆಡೆ ಪಸರಿಸುವಂತೆ ಆಗಬೇಕು. ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ಮಾಡುವುದರಿಂದ ದುಷ್ಟಶಕ್ತಿಗಳ ಕಡಿವಾಣ ಸಾಧ್ಯ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಶ್ರೀ ಬಹ್ಮಾನಂದ ಸ್ವಾಮೀಜಿಯವರು ಹೇಳಿದರು.

ಅವರು ಶಿರಾಲಿ ಸಾರದೊಳೆ ಹಳೇಕೋಟಿ ಹನ್ಮಂತ ದೇವಸ್ಥಾನದಲ್ಲಿ ಏರ್ಪಡಿಸಲಾದ ಗಾಯತ್ರಿ ಮಹಾಯಜ್ಞ ಹಾಗೂ ಗುರುಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು. ಪ್ರತಿಯೊಬ್ಬರೂ ವಿದ್ಯಾವಂತರಾಗಿ ಸಂಸ್ಕಾರಯುತರಾಗಬೇಕು. ನಮ್ಮ ಧಾರ್ಮಿಕ ಆಚರಣೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸಮಾಜದ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕಿದೆ. ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದವರ ಬಗ್ಗೆ ಅಸೂಯೆ ಪಡದೇ ನಾವೂ ಸಹ ಅವರಂತೆ ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಛಲ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ಕೆ ಎಸ್ಡಿ‌ಎಲ್‌ನ ಅಧ್ಯಕ್ಷ ಶಿವಾನಂದ ನಾಯ್ಕ ಈ ಹಿಂದೆ ಗಾಯತ್ರಿ ಮಂತ್ರ ಪಠಣ ಕೆಲವರ ಸೊತ್ತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಎಲ್ಲರೂ ಗಾಯತ್ರಿ ಮಂತ್ರವನ್ನು ಪಠಣ ಮಾಡಬಹುದಾಗಿದೆ. ಸಮಾಜದಲ್ಲಿನ ಬಡವರನ್ನು ಉಳ್ಳವರು, ವಿದ್ಯಾವಂತರು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಏಕತೆ, ಪ್ರೀತಿ,ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕೆಟ್ಟ ವಿಚಾರಗಳನ್ನು ತೊಡಗಿಸಲು ಹೆಚ್ಚೆಚ್ಚು ಧಾರ್ಮಿಕ ಕಾರ್ಯಕ್ರಮಗಳಾಗಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಶಾಸಕ ಜೆ ಡಿ ನಾಯ್ಕ ಮಾತನಾಡಿ ಯಾವುದೇ ಕಾರ್ಯವನ್ನು ಶೃದ್ಧೆ ಭಕ್ತಿಯಿಂದ ಮಾಡಿದರೆ ಖಂಡಿತ ಯಶಸ್ಸು ಲಭಿಸುತ್ತದೆ. ಲೋಕಕಲ್ಯಾಣಕ್ಕಾಗಿ ಗಾಯತ್ರಿ ಮಹಾಯಜ್ಞವನ್ನು ನಡೆಸಿರುವುದು ಉತ್ತಮ ಕಾರ್ಯ. ನಮ್ಮಲ್ಲಿನ ಮೂಡನಂಬಿಕೆಯನ್ನು ಆದಷ್ಟು ತೊಡೆದು ಹಾಕಲು ಎಲ್ಲರೂ ಮುಂದಾಗಬೇಕು ಎಂದು ಅವರು ಹೇಳಿದರು. ಜಿಪಂ ಉಪಾಧ್ಯಕ್ಷೆ ಪುಷ್ಪಾ ನಾಯ್ಕ, ಶಿರಾಲಿ ಗ್ರಾಪಂ ಮಾಜಿ ಅಧ್ಯಕ್ಷ ಬಿ ಕೆ ನಾಯ್ಕ, ಶ್ರೀರಾಮ ಕ್ಷೇತ್ರದ ಟ್ರಸ್ಟಿ ಜೆ ಎನ್ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ಭಟ್ಕಳ ನಾಮಧಾರಿ ಕೂಟದ ಅಧ್ಯಕ್ಷ ಟಿ ಎನ್ ನಾಯ್ಕ, ಸುಬ್ರಾಯ ನಾಯ್ಕ, ರಾಮ ನಾಯ್ಕ, ಗಾಯತ್ರಿ ಮಹಾಯಾಗ ನಡೆಸಿಕೊಟ್ಟ ಎಂ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಾರದೊಳೆ ನಾಮಧಾರಿ ಕೂಟದ ಅಧ್ಯಕ್ಷ ಜೆ ಜೆ ನಾಯ್ಕ ಸ್ವಾಗತಿಸಿದರು. ಶಂಕರ ನಾಯ್ಕ ನಿರೂಪಿಸಿದರು. ಗಾಯತ್ರಿ ಮಹಾಯಾಗವನ್ನು ಮಹಿಳೆಯರೇ ನಡೆಸಿಕೊಟ್ಟಿರುವುದು ವಿಶೇಷವಾಗಿತ್ತು. ಯಾಗದ ಸಂದರ್ಭದಲ್ಲಿ ಮಂತ್ರದ ಪಠಣ ಹಾಗೂ ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.


Share: