ಮಂಗಳೂರು, ಅ.31: ಗ್ರಾಮೀಣ ಪ್ರದೇಶದಲ್ಲಿ ಶಿಶು ಆರೋಗ್ಯ ಸೇವೆ ನೀಡಲು ತಜ್ಞ ವೈದ್ಯರು ಮುಂದಾಗಬೇಕು ಎಂದು ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದರು.
ಅವರು ಇಂದು ನಗರದ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಎರಡು ದಿನಗಳ ಕರ್ನಾಟಕ ರಾಜ್ಯ ಶಿಶು ಮತ್ತು ಮಕ್ಕಳ ಆರೋಗ್ಯ ಶಾಸ್ತ್ರ ತಜ್ಞರ ‘ಕರ್ನಾಟಕ ಪೆಡಿಕೋನ್’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆ ಇನ್ನೂ ಸುಧಾರಿಸಿಲ್ಲ. ಅದರಲ್ಲೂ ಶಿಶುಗಳ ಹಾಗೂ ಮಕ್ಕಳ ಆರೋಗ್ಯ ಸೇವಾ ವಿಭಾಗ ಕಳವಳಕಾರಿಯಾಗುವ ಸಂಗತಿಗಳನ್ನು ಹೊಂದಿದೆ. ವೈದ್ಯಕೀಯ ಕ್ಷೇತ್ರದಲ್ಲೂ ಇತರ ಕ್ಷೇತ್ರಗಳಂತೆ ಭ್ರಷ್ಟಾಚಾರ ಹಾಗೂ ಇನ್ನಿತರ ಸಾಕಷ್ಟು ಲೋಪದೋಷಗಳಿವೆ. ಇದರಿಂದ ಗ್ರಾಮೀಣ ಜನರು ತೊಂದರೆUಡಾಗಿದ್ದಾರೆ. ಶಿಶು ವೈದ್ಯಕೀಯ ಕ್ಷೇತ್ರದ ವಿಶೇಷ ಸೇವಾ ವಿಭಾಗದ ಸೇವೆಗಳ ವಿಶೇಷ ಸೌಲಭ್ಯಗಳು ಕೇವಲ ನಗರ ಕೇಂದ್ರೀಕೃತವಾಗಿವೆ. ನಗರದಲ್ಲಿರುವ ಶಿಶು ತಜ್ಞರು ತಿಂಗಳಲ್ಲಿ ಒಂದು ದಿನವಾದರೂ ಹಳ್ಳಿಯ ಕಡೆ ಮುಖ ಮಾಡಿದರೆ ಸಾಕಷ್ಟು ಸುಧಾರಣೆಯಾಗಬಹುದು ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯಿಸಿದರು.
ಇಂದು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡಲು ಆರೋಗ್ಯಾಧಿಕಾರಿಗಳ ವೈದ್ಯರ ವೇತನವನ್ನು ಹೆಚ್ಚಳ ಮಾಡಿದರೂ ಸುಧಾರಣೆಯಾಗಿಲ್ಲ. ಸರಕಾರಿ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಬೇಕೆಂಬ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ. ಈ ನಿಟ್ಟಿನಲ್ಲಿ ಖಾಸಗಿ ಕ್ಷೇತ್ರದ ವೈದ್ಯರು ಗಮನಹರಿಸಬೇಕು. ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಸರಕಾರಿ ಆಸ್ಪತ್ರೆಗಳು ಜನರ ವಿಶ್ವಾಸಗಳಿಸುವಂತೆ ಸೇವೆ ನೀಡಬೇಕೆಂದು ಸಂತೋಷ್ ಹೆಗ್ಡೆ ಕರೆ ನೀಡಿದರು.
ದೇಶದಲ್ಲಿ ಶಿಶು ಮರಣ ಪ್ರಮಾಣ ಶೇ. ೫೭ಕ್ಕಿಂತ ೫೪ಕ್ಕೆ ಇಳಿದಿದೆ. ಈ ಪ್ರಮಾಣ ಇನ್ನಷ್ಟು ಇಳಿಕೆಯಾಗಬೇಕಾಗಿತ್ತು. ಈ ನಿಟ್ಟಿನಲ್ಲಿ ಭಾರತೀಯ ಶಿಶು ತಜ್ಞರ ಸಂಘ ಕಾರ್ಯ ನಿರ್ವಹಿಸಲಿದೆ ಎಂದು ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಪನ್ನಾ ಚೌಧರಿ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಮಕ್ಕಳ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಮೂರು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗಾಗಿ ಚುಚ್ಚು ಮದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಡಾ.ಪನ್ನಾ ಚೌಧರಿ ತಿಳಿಸಿದರು.
ರಾಜ್ಯಾಧ್ಯಕ್ಷ ಡಾ. ಸುಬ್ಬರಾವ್ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸಂಘದ ಶಾಖೆಗಳನ್ನು ಸ್ಥಾಪಿಸಿ ಸಮಾಜದ ಆರೋಗ್ಯ ಸೇವೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಶು ಮತ್ತು ಮಕ್ಕಳ ಆರೋಗ್ಯ ಶಾಸ್ತ್ರ ಕ್ಷೇತ್ರದ ಸಾಧಕರನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ರಾಜ್ಯದ ಕಾರ್ಯದರ್ಶಿ ಡಾ.ಹಬೀಬ್ ಖಾನ್, ಮಾಜಿ ರಾಜ್ಯಾಧ್ಯಕ್ಷ ಡಾ.ಯು.ವಿ.ಶೆಣೈ, ನಿಯೋಜಿತ ರಾಜ್ಯಾಧ್ಯಕ್ಷ ಡಾ.ದೊಡ್ಡೆ ಗೌಡ ಉಪಸ್ಥಿತರಿದ್ದರು.
ಸಂಘಟನಾ ಅಧ್ಯಕ್ಷ ಡಾ.ಸಂಜೀವ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಸಂತೋಷ್ ಸೋನ್ಸ್ ವಂದಿಸಿದರು. ರೋಹಿತ್ ಮತ್ತು ಸಿಂತಿಯಾ ಕಾರ್ಯಕ್ರಮ ನಿರೂಪಿಸಿದರು