ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಶಾಶ್ವತ ಪಡಿತರ ಚೀಟಿ ವಿತರಣೆಗೆ ತಾಲೂಕು ಆಡಳಿತ ಸನ್ನದ್ಧ

ಭಟ್ಕಳ: ಶಾಶ್ವತ ಪಡಿತರ ಚೀಟಿ ವಿತರಣೆಗೆ ತಾಲೂಕು ಆಡಳಿತ ಸನ್ನದ್ಧ

Sun, 11 Oct 2009 03:01:00  Office Staff   S.O. News Service
ಭಟ್ಕಳ, ಅಕ್ಟೋಬರ್ 10: ೨೦೦೬ನೇ ಸಾಲಿನಲ್ಲಿ ವಿತರಿಸಲಾದ ಅಂತ್ಯೋದಯ, ಅಕ್ಷಯ, ಎಪಿ‌ಎಲ್, ತಾತ್ಕಾಲಿಕ ಪಡಿತರ ಚೀಟಿದಾರರಿಗೆ ಖಾಯಂ ಪಡಿತರ ಚೀಟಿಯನ್ನು ದಿನಾಂಕ ೧೨-೧೦-೨೦೦೯ರಿಂದ ೧೩-೧೧-೨೦೦೯ರವರೆಗೆ ಸಂಬಂಧಪಟ್ಟ ಅದೇ ನ್ಯಾಯಬೆಲೆ/ಸೇವಾ ಸಹಕಾರಿ ಬ್ಯಾಂಕ್‌ನ ಮುಖಾಂತರ ವಿತರಿಸಲಾಗುವುದು ಎಂದು ಭಟ್ಕಳ ತಹಸೀಲ್ದಾರ ಎಸ್.ಎಮ್.ನಾಯ್ಕ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
 
೨೦೦೬ನೇ ಇಸವಿಯಲ್ಲಿ ಪಡೆದುಕೊಂಡಂತಹ ಪಡಿತರ ಚೀಟಿದಾರರು ತಮ್ಮ ಕುಟುಂಬದಲ್ಲಿ ತಮ್ಮ ಕುಟುಂಬದ ಹನ್ನೆರಡು ವರ್ಷ ಮೇಲ್ಪಟ್ಟವರು ಅದೇ ನ್ಯಾಯ ಬೆಲೆ ಅಂಗಡಿಗಳಿಗೆ ಹಾಜರಾಗಿ ರೂ.೧೫/- ಪಾವತಿಸಿ ಪ್ರಸ್ತುತ ತಮ್ಮಲ್ಲಿದ್ದ ತಾತ್ಕಾಲಿಕ ಪಡಿತರ ಚೀಟಿಯನ್ನು ತಪ್ಪದೇ ಹಿಂದಿರುಗಿಸಿ ಖಾಯಂ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ

Share: