ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕೇಂದ್ರೀಯ ಹಾಗೂ ವಿಭಾಗೀಯ ತನಿಖಾ ದಳಗಳ ಪ್ರಗತಿ ಪರಿಶೀಲನಾ ಸಭೆ

ಕೇಂದ್ರೀಯ ಹಾಗೂ ವಿಭಾಗೀಯ ತನಿಖಾ ದಳಗಳ ಪ್ರಗತಿ ಪರಿಶೀಲನಾ ಸಭೆ

Thu, 17 Oct 2024 18:35:35  Office Staff   S O News

ಬೆಂಗಳೂರು/ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ, ಪ್ರಾದೇಶಿಕ ತರಬೇತಿ ಕೇಂದ್ರ, ಹುಬ್ಬಳ್ಳಿಯಲ್ಲಿ ಕೇಂದ್ರೀಯ ಹಾಗೂ ವಿಭಾಗೀಯ ತನಿಖಾ ದಳಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.

ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ ಎಂ. ಅವರು ಮಾತನಾಡಿ, ಸಂಸ್ಥೆಯ ಆದಾಯ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ, ಸಂಸ್ಥೆಯ ಸಾರಿಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕತೆಯಿಂದ ಹಾಗೂ ಶಿಸ್ತು ಮತ್ತು ಸನ್ನಡತೆಯಿಂದ ಕರ್ತವ್ಯ ನಿರ್ವಹಿಸುವಂತೆ ತನಿಖಾ ಸಿಬ್ಬಂದಿಗಳಿಗೆ ಸೂಚಿಸಿದರು.

ಮುಖ್ಯ ಸಂಚಾರ ವ್ಯವಸ್ಥಾಪಕರಾದ ವಿವೇಕಾನಂದ ವಿಶ್ವಜ್ಞ ಹಾಗೂ ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜಿ. ವಿಜಯಕುಮಾರ ಅವರು ತನಿಖಾ ಕಾರ್ಯದ ಪ್ರಗತಿ ಪರಿಶೀಲನೆ ಮಾಡಿ ತನಿಖಾ ಸಿಬ್ಬಂದಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ರವಿ ಅಂಚಗಾವಿ, ಹನುಮಗೌಡ ಜಿ, ವಿ.ಎನ್. ಮಾಕಣ್ಣವರ ಹಾಗೂ ತನಿಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹಾಯಕ ಸಂಚಾರ ವ್ಯವಸ್ಥಾಪಕರಾದ ಶಿವಾನಂದ ನಾಗಾವಿ ಅವರು ಸ್ವಾಗತಿಸಿ, ವಂದಿಸಿದರು.


Share: