ಬೆಂಗಳೂರು, ಫೆಬ್ರವರಿ 2: ಸ್ವದೇಶಿ ನಿರ್ಮಿತ ದೇಶದ ಹೆವ್ಮ್ಮೆಯ ಲಘು ಯುದ್ಧ ವಿಮಾನ ತೇಜಸ್‌ನ ಪ್ರಯೋತಾರ್ಥ ಹಾರಾಟ ನಗರದಲ್ಲಿ ಯಶಸ್ವಿಯಾಗಿ ನೆರವೇರಿತು.
ರಕ್ಷಣಾ ಸಚಿವ ಎ.ಕೆ. ಆಂಟನಿ ನಗರದಲ್ಲಿ ತೇಜಸ್ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು. ಎಚ್.ಎ.ಎಲ್. ತಂತ್ರಜ್ಞರು ಸ್ವದೇಶಿ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ತೇಜಸ್ ಯುದ್ಧ ವಿಮಾನ ಇದಾಗಿದೆ.
ಬರುವ 2012 ರ ವೇಳೆಗೆ ಈ ಯುದ್ಧ ವಿಮಾನ ಸೇನೆಗೆ ಸೇರ್ಪಡೆಗೊಳ್ಳಲಿದೆ ಎಂದು ಆಂಟನಿ ಘೋಷಿಸಿದರು.